ಕಳಸ ಲೈವ್ ವರದಿ
ಆಗಸ್ಟ್ 1ರಿಂದ 12ರ ವರೆಗೆ ದಕ್ಷಿಣ ಕೋರಿಯಾದ ಜಿಯಲ್ಲೊ ಬುಕ್-ಡೋ ನಗರದ ಸೀಮನ್ ಗಾಮ್ ನಲ್ಲಿ ನಡೆಯಲಿರುವ 25ನೇ ವಿಶ್ವ ಜಾಂಬೂರಿಯಲ್ಲಿ ಭಾರತವನ್ನು ಪ್ರತಿನಿಧಿಸಲು ಶಶಾಂಕ್ ಕೆ.ಸಿ ಆಯ್ಕೆಯಾಗಿದ್ದಾರೆ.
ಕಳಸ ತೋಟಗಾರಿಕಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಪ್ಪ ಮತ್ತು ರೇಖಾ ಅವರ ಪುತ್ರನಾಗಿದ್ದು, ಕಳಸ ಜೆಇಎಮ್ ಶಾಲೆಯಲ್ಲಿ ಏಳನೇ ತರಗತಿಯ ವರೆಗೆ ವಿದ್ಯಾಬ್ಯಾಸ ಮಾಡುತ್ತಿದ್ದರು. ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಹೆಚ್.ಆರ್.ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಸ್ಕೌಟ್ ಮತ್ತು ಗೈಡ್ನಲ್ಲಿ ಮುಂಚೂನಿಯಲ್ಲಿದ್ದರು. ಪ್ರಸ್ತುತ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆ ಅಳಿಕೆ ಇಲ್ಲಿ ಶಶಾಂಕ್ 10ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾರೆ.
ಜುಲೈ 31ಕ್ಕೆ ಮಂಗಳೂರಿನಿಂದ ಬೆಂಗಳೂರು ಹಾಂಕಾಂಗ್ ಮೂಲಕ ದಕ್ಷಿನ ಕೋರಿಯಕ್ಕೆ ತೆರಳಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಈ ವಿದ್ಯಾರ್ಥಿಯ ಸ್ಕೌಟ್ ಜೀವನ ಜೆಇಎಮ್ ಪ್ರೌಢಶಾಲೆ ಕಳಸದಿಂದ ಪ್ರಾರಂಭವಾಗಿದ್ದು ನನ್ನ ವಿದ್ಯಾರ್ಥಿಯಾಗಿದ್ದ ಎನ್ನುವುದರಲ್ಲಿ ಹೆಮ್ಮೆಯಿದೆ.
ಈ ಸಂತೋಷದ ವಿಷಯವನ್ನು ಕಳೆದೆರಡು ದಿನಗಳ ಹಿಂದೆ ಸ್ವತಃ ಶಶಾಂಕ್ ಬಾಯಿಂದ ಕೇಳುವಾಗ ಸ್ಕೌಟ್ ತರಬೇತುದಾರನಾಗಿ ಬಹಳಷ್ಟು ಹೆಮ್ಮೆ ಎಂದೆನಿಸಿತು ಎಂದು ಕಳಸದ ಜೆಇಎಮ್ ಶಾಲೆಯ ಶಿಕ್ಷಕ ಹೆಚ್.ಆರ್.ಪ್ರಶಾಂತ್ ಹೇಳುತ್ತಾರೆ.