ಕಳಸ ಲೈವ್ ವರದಿ
ಹೊರನಾಡು ಗ್ರಾಮ ಪಂಚಾಯಿತಿಯ ಎರಡನೇ ಅವದಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಧು ಪ್ರಸಾದ್ ಹಾಗೂ ಉಪಾಧ್ಯಕ್ಷರಾಗಿ ಪುಷ್ಪಲತಾ ಹೆಚ್ ರಾಮು ಆಯ್ಕೆಯಾದರು.
ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾದ ಮುಧು ಪ್ರಸಾದ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಪುಷ್ಪಲತಾ ರಾಮು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದರು.
ಆದರೆ ಬೇರೆ ಯಾರೂ ಕೂಡ ನಾಮ ಪತ್ರ ಸಲ್ಲಿಕೆ ಮಾಡದ ಹಿನ್ನಲೆಯಲ್ಲಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿಯಾಗಿ ಕಳಸ ಆರ್ಎಫ್ಒ ನಿಶ್ಚಿತ್ ಕರ್ತವ್ಯ ನಿರ್ವಹಿಸಿದರು.ನಂತರ ನಡೆದ ಅಭಿನಂದನಾ ಸಭೆಯಲ್ಲಿ ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಶ್ರೇಣಿಕ, ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್, ಮಾಜಿ ತಾ.ಪಂ ಸದಸ್ಯರುಗಳಾದ ರಾಜೇಂದ್ರ ಹಿತ್ಲುಮಕ್ಕಿ, ಮಹಮ್ಮದ್ ರಫೀಕ್, ಕಾಂಗ್ರೆಸ್ ಯೂತ್ ಅಧ್ಯಕ್ಷ ಕೆ.ಸಿ.ಮಹೇಶ್, ಮುಖಂಡರಾದ ವಿಶ್ವನಾಥ ಮರಸಣಿಗೆ, ವೀರೇಂದ್ರ, ಸುಜಿತ್ ಜೈನ್, ಚಂದ್ರು ಇತರರು ಇದ್ದರು.