ಕಳಸ ಲೈವ್ ವರದಿ
ಕಳಸ ತಾಲ್ಲೂಕಿನಲ್ಲಿರುವ ನಿವೇಶನ ಸಮಸ್ಯೆಗೆ ಅರಣ್ಯ ಇಲಾಖೆಯಿಂದ ಇರುವ ತೊಂದರೆಗಳನ್ನು ನಿವಾರಿಸುವ ಬಗ್ಗೆ ಕಳಸದ ಕಾಂಗ್ರೆಸ್ ಮುಖಂಡರು ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್ ಅವರ ಗಮನ ಸೆಳೆದರು.
ಸೋಮವಾರ ಅವರ ಕಚೇರಿಗೆ ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್, ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಶ್ರೇಣಿಕ, ಕಾರ್ಯದರ್ಶಿ ವಿಶ್ವನಾಥ್ ತೆರಳಿದ್ದರು.
ತಾಲ್ಲೂಕಿನ ಕಳಸ, ಸಂಸೆ, ಹೊರನಾಡು, ಮರಸಣಿಗೆ, ಇಡಕಿಣಿ ಮತ್ತು ತೋಟದೂರು ಪಂಚಾಯಿತಿಗಳಲ್ಲಿ ನೂರಾರು ವಸತಿ ರಹಿತರು ಇದ್ದಾರೆ.ಆದರೆ ಅವರಿಗೆ ನಿವೇಶನ ಒದಗಿಸಲು ಇರುವ ಎಲ್ಲ ಕಂದಾಯ ಭೂಮಿಯೂ ಸಾಮಾಜಿಕ ಅರಣ್ಯದ ಅಕೇಶಿಯಾ ನೆಡುತೋಪು ಆಗಿದೆ.ಈ ನೆಡುತೋಪುಗಳಲ್ಲೇ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ಅರಣ್ಯ ಇಲಾಖೆ ಸಹಕಾರ ನೀಡಬೇಕು ಎಂದು ಕೆ.ಆರ್. ಪ್ರಭಾಕರ್ ನಂದೀಶ್ ಅವರಲ್ಲಿ ಕೋರಿದರು.
ತಾಲ್ಲೂಕಿನ ಹಲವೆಡೆ ರಸ್ತೆಗಳ ಮೇಲೆ, ಮನೆಗಳ ಮೇಲೆ ಹಾಗೂ ವಿದ್ಯುಚ್ಛಕ್ತಿ ಕಂಬಗಳ ಮೇಲೆ ಬೀಳಬಹುದಾದ ಮರಗಳ ತೆರವಿಗೆ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಶ್ರೇಣಿಕ ಹಾಗೂ ವಿಶ್ವನಾಥ್ ಡಿಎಫ್ಓ ಗಮನ ಸೆಳೆದರು.