ಕಳಸ ಲೈವ್ ವರದಿ
ಕಳಸ ಕೆಕೆಬಿ ಬಸ್ಸು ಮಾಲಿಕರಾದ ಕೆ.ಕೆ.ಬಾಲಕೃಷ್ಣ ಭಟ್ ಅವರಿಗೆ ಹರಿಹರ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠ, ಶ್ರೀ ಮಠ ಚಾತುರ್ಮಾಸ್ಯ ಮಹೋತ್ಸವ ಸೇವಾ ಸಮಿತಿ ವತಿಯಿಂದ ಸಾಧಕಶ್ರೀ ಪ್ರಶಸ್ತಿಯನ್ನು ಭಾನುವಾರ ಪ್ರಧಾನ ಮಾಡಲಾಯಿತು.
ಬೆಂಗಳೂರಿನ ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ, ಮಹಾಲಕ್ಷ್ಮೀ ಲೇಔಟ್ ಇಲ್ಲಿ ನಡೆದ ಸಮಾರಂಭದಲ್ಲಿ ಹರಿಹರ ಮಠದ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚದಾನಂದ ಸರಸ್ವತೀ ಮಹಾಸ್ವಾಮಿಗಳು ಪ್ರಶಸ್ತಿಯನ್ನು ಪ್ರಧಾನ ಮಾಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಅತ್ಯುತ್ತಮವಾಗಿ ಸಾರಿಗೆ ಸೇವೆಯನ್ನು ನೀಡುತ್ತಿರುವ ಕಳಸದ ಕೆ.ಕೆ.ಬಾಲಕೃಷ್ಣ ಭಟ್ ಅವರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಈ ಸಂದರ್ಭದಲ್ಲಿ ಹೊರನಾಡು ಕ್ಷೇತ್ರದ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ, ರಾಜಲಕ್ಷ್ಮೀ ಬಿ ಜೋಷಿ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ದಾಸರವಳ್ಳಿ ಶಾಸಕ ಮುನಿರಾಜು, ಹರಿಹರಮಠದ ಆಡಳಿತಾಧಿಕಾರಿ ಬಿ.ಎಸ್.ರವಿಶಂಕರ್, ಚಾತುರ್ಮಾಸ್ಯ ಮಹೋತ್ಸವದ ಪ್ರಧಾನ ಸಂಚಾಲಕ ಬಿ.ಎಸ್. ರಾಘವೇಂದ್ರ ಭಟ್ ಇದ್ದರು.