ಕಳಸ ಲೈವ್ ವರದಿ
ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲಿನಮಕ್ಕಿ ರಸ್ತೆಯ ಒಂದೂವರೆ ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆ ಸಂಪೂರ್ಣ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪರಿಶಿಷ್ಠ ಜಾತಿ ಮತ್ತು ಪಂಗಡಕ್ಕೆ ಕಾಲೋನಿಗೆ ನೀಡಿದ ಕಳಸ ಗ್ರಾಮ ಪಂಚಾಯಿತಿಯ 15ನೇ ಹಣಕಾಸಿನಲ್ಲಿ ಒಂದೂವರೆ ಲಕ್ಷ ವೆಚ್ಚದಲ್ಲಿ ಈ ಕಾಮಗಾರಿಯನ್ನು ಮಾಡಲಾಗಿದೆ.ಎರಡು ಲೋಡ್ ಎಂ ಸೆಂಡ್, ಮೂರು ಲೋಡು ಜಲ್ಲಿ, 15 ಚೀಲ ಸಿಮೆಂಟಿನಲ್ಲಿ ಈ ರಸ್ತೆಯನ್ನು ಮುಗಿಸಲಾಗಿದೆ. ಯಾವುದೇ ಚರಂಡಿಯ ವ್ಯವಸ್ಥೆಯನ್ನು ಮಾಡದೆ. ರಸ್ತೆಯ ಕೆಲಬಾಗದಲ್ಲಿರುವ ಕುಡಿಯುವ ನೀರಿನ ಕೆರೆಗೆ ಇದರ ನೀರು ಹೋಗುತ್ತಿದ್ದು ಕುಡಿಯುವ ನೀರಿಗೂ ತೊಂದರೆ ಮಾಡಲಾಗಿದೆ. 125 ಅಡಿ ಉದ್ದ ರಸ್ತೆಯಾಗಬೇಕಿತ್ತು ಆದರೆ ಕೇವಲ 100 ಅಡಿಗಳಷ್ಟು ಕಾಮಗಾರಿಯನ್ನು ಮಾಡಿ ಮುಗಿಸಲಾಗಿದೆ. ಕಾಂಕ್ರೀಟ್ ರಸ್ತೆ ಮಾಡುವ ಯಾವ ಮಾನದಂಡವನ್ನು ಕೂಡ ಇಲ್ಲಿ ಅನುಸರಿಸಿಲ್ಲ. ಬೆಳಿಗ್ಗೆ ಬಂದು ಸಂಜೆಯ ಹೊತ್ತಿಗೆ ಇಲ್ಲಿ ಕಾಮಗಾರಿಯನ್ನು ಮಾಡಿ ಮುಗಿಸಲಾಗಿದೆ. ಒಂದೂವರೆ ಲಕ್ಷ ವೆಚ್ಚದ ಕಾಮಗಾರಿಯನ್ನು 35 ರಿಂದ 40 ಸಾವಿರ ರೂಪೈನಲ್ಲಿ ಮಾಡಲಾಗಿದೆ.
ಈ ಕಾಮಗಾರಿಯು ಸಂಪೂರ್ಣವಾಗಿ ಕಳಪೆಯಾಗಿದ್ದು, ಈ ಕೂಡಲೇ ಈ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಧ್ಯಕ್ಷರು ಬಂದು ಪರಿಶೀಲನೆ ಮಾಡಬೇಕು ಮತ್ತು ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಬ್ಲಾಕ್ ಲೀಸ್ಟ್ ಗೆ ಸೇರಿಸಬೇಕು ಅಲ್ಲದೆ ಈ ಕಾಮಗಾರಿಯನ್ನು ಕಿತ್ತು ತೆಗೆದು ವೈಜ್ಞಾನಿಕವಾಗಿ ಮರು ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರ ಪರವಾಗಿ ರಜಿತ್ ಕೆಳಗೂರು ಆಗ್ರಹಿಸಿದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವೀಶ್ ಪ್ರತಿಕ್ರೀಯೆ ನೀಡಿದ್ದು, ಈ ಕಾಮಗಾರಿ ಸಂಪೂರ್ಣ ಆಗಿಲ್ಲ ಇನ್ನೂ 20 ಮೀಟರ್ ಕಾಮಗಾರಿ ಉಳಿದಿದೆ.ಅಲ್ಲದೆ ಈ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಗ್ರಾಮ ಪಂಚಾಯಿತಿಯಿಂದ ಯಾವುದೇ ಬಿಲ್ ಪಾವತಿಯನ್ನು ಮಾಡಿಲ್ಲ ಎಂದು ಪ್ರತಿಕ್ರೀಯೆ ನೀಡಿದ್ದಾರೆ.