ಕಳಸ ಲೈವ್ ವರದಿ
ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾರುಕುಣಿ ಶಾಂತಪ್ಪ ಗೌಡ ಅವರ ಮನೆಯಲ್ಲಿ ಗ್ಯಾಸ್ ಸೋರಿಕೆಯಗಿ ಬೆಂಕಿ ತಗುಲಿದ್ದು ಹಾನಿ ಯಾಗಿದೆ.
ಸೋಮವಾರ ತಡ ರಾತ್ರಿ ಸಿಲಿಂಡರ್ ನಲ್ಲಿ ಬೆಂಕಿ ಕಣಿಸಿಕೊಂಡಿದ್ದು, ಕೂಡಲೇ ಮನೆಯಲ್ಲಿ ಇದ್ದವರು ಹೊರಗಡೆ ಬಂದಿದ್ದಾರೆ. ಕೂಡಲೇ ಅಕ್ಕ ಪಕ್ಕದ ಮನೆಯವರು ನೆರವಿಗೆ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಕಿಯಿಂದ ಮನೆಯಲ್ಲಿದ್ದ ಬಟ್ಟೆ ಬರೆ, ಕಾಳು ಮೆಣಸು, ಚೇರ್ಗಳು ಸುಟ್ಟು ಹೋಗಿದೆ.