ಕಳಸ ಲೈವ್ ವರದಿ
ಬೀದಿ ದೀಪ ಇಲ್ಲದ ಹೆಬ್ಬಾಳೆಗೆ ಒಂದೇ ಗಂಟೆಯಲ್ಲಿ ಚಿಕ್ಕಮಗಳೂರು ಕಂದಾಯ ಉಪವಿಭಾಗಾಧಿಕಾರಿ ರಾಜೇಶ್ ಬೀದಿ ದೀಪ ಹಾಕಿಸಿದ ಘಟನೆ ಗುರುವಾರ ನಡೆಯಿತು.
ಮಳೆ ಹಿನ್ನಲೆಯಲ್ಲಿ ಕಂದಾಯ ಉಪವಿಭಾಗಾಧಿಕಾರಿ ರಾಜೇಶ್ ಗುರುವಾರ ಕಳಸ-ಹೊರನಾಡು ರಸ್ತೆಯ ಹೆಬ್ಬಾಳೆಗೆ ಬೇಟಿ ನೀಡಿದ್ದರು.ಈ ಸಂದರ್ಭದಲ್ಲಿ ಸ್ಥಳಿಯ ಗ್ರಾಮಸ್ಥರಾದ ಸಂತೋಷ್ ಮೂಲ್ಯ ಅವರು ಹೆಬ್ಬಾಳೆ ಪ್ರದೇಶವು ಅತ್ಯಂತ ಅಪಾಯಕಾರಿ ಸ್ಥಳವಾಗಿದೆ.ಸೇತುವೆ ಕಮಗಾರಿ ನಡೆಯುತ್ತಿರುವುದರಿಂದ ಈ ಪ್ರದೇಶದಲ್ಲಿ ಅಲ್ಲಲ್ಲಿ ಅಗೆದು ಹಾಕಲಾಗಿದೆ.ಇದರಿಂದ ರಾತ್ರಿ ಹೊತ್ತಲ್ಲಿ ಬರುವ ಪ್ರಯಾಣಿಕರಿಗೆ ಗೋತ್ತಾಗುತ್ತಿಲ್ಲ.ಕೆಲ ದಿನಗಳ ಹಿಂದೆಯಷ್ಟೆ ವಾಹನವೊಂದು ನದಿಗೆ ಬಿದ್ದಿರುವುದನ್ನು ನಾವು ಸ್ಥಳಿಯರು ಎತ್ತಿದ್ದೇವೆ. ಆದ್ದರಿಂದ ಸೇತುವೆಯ ಎರಡೂ ಬದಿ ಬೀದಿ ದೀಪ ಅಳವಡಿಸಿದರೆ ಅನುಕೂಲವಾಗುತ್ತದೆ ಎಂದು ಅವರು ಅಧಿಕಾರಿಗಳ ಗಮನಕ್ಕೆ ತಂದರು.
ಕೂಡಲೇ ಕಳಸ ಪಿಡಿಒ ಕವೀಶ್ ಅವರಿಗೆ ಕರೆ ಮಾಡಿ ಕೂಡಲೇ ಬೀದಿ ದೀಪ ಅಳವಡಿಸುವಂತೆ ಎಸಿ ರಾಜೇಶ್ ಸೂಚಿಸಿದರು.
ಇದಾಗಿ ಒಂದು ಗಂಟೆಯ ಒಳಗಾಗಿ ಬೀದಿ ದೀಪವನ್ನು ಅಳವಡಿಸಲಾಗಿದೆ.