ಕಳಸ ಲೈವ್ ವರದಿ
ಇನ್ಪೈರ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ದೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಕುಮಾರಿ ಮಂದಾರ ಎಸ್ ಭಟ್ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ ಅಟಲ್ ಲ್ಯಾಬ್ ನಲ್ಲಿ ಸ್ಥಳೀಯ ರೈತರಿಗೆ ಸಹಾಯವಾಗುವಂತ”Automatic Rain Shed To Protect Crop From Sudden Rain” ಎಂಬ ಮಾದರಿ ತಯಾರಿಸಿದ್ದು, ಇದು ರಾಷ್ಟ್ರ ಮಟ್ಟಕ್ಕೆಆಯ್ಕೆಯಾಗಿದೆ ಎಂದು ಮಾರ್ಗದರ್ಶಿ ಶಿಕ್ಷಕರಾದ ಸಂದೇಶ ತಿಳಿಸಿದರು.
ಶಿಕ್ಷಕರ ಉತ್ತಮ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಯ ಪರಿಶ್ರಮದಿಂದ ನಮ್ಮ ಶಾಲೆ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುತ್ತಿದೆ. ನಮ್ಮ ಶಾಲೆಯಲ್ಲಿ ಉತ್ತಮ ನುರಿತ ಶಿಕ್ಷಕರ ತಂಡವಿದ್ದು ಗುಣಮಟ್ಟದ ಶಿಕ್ಷಣದ ಜೊತೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ತೋರುತ್ತಿದೆ, ಅದರಲ್ಲೂ ವಿಜ್ಞಾನ ಕ್ಷೇತ್ರಕ್ಕೆ ಅಟಲ್ ಲ್ಯಾಬ್ ನ ಕೊಡುಗೆ ಅಪಾರವಾದದ್ದು ಎಂದು ಉಪ ಪ್ರಾಂಶುಪಾಲರಾದ ಜಿ.ಶಿವಕುಮಾರ ಸ್ವಾಮಿ ತಿಳಿಸಿದರು.
Related Stories
September 18, 2024
September 6, 2024