ಕಳಸ ಲೈವ್ ವರದಿ
ಬೆಂಗಳೂರಿನ ಇಬಿಸು ಸ್ಟುಡಿಯೋದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಟ್ರೇಡರ್ ಚೇಂಬರ್ ಆಪ್ ಕಾಮರ್ಸ್ ಆಯೋಜಿಸಿದ್ದ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ 2023 ಸೀಸನ್ 3 ರಲ್ಲಿ Hotel and hospitality sector ವಿಭಾಗದಲ್ಲಿ “ಘಾಟ್ ಸ್ಟೇ” ಬೆಸ್ಟ್ ಹೋಂ ಸ್ಟೇ ಬುಕ್ಕಿಂಗ್ ಪ್ಲಾಟ್ಫಾರ್ಮ್ ಅವಾರ್ಡ್ ಪಡೆದುಕೊಂಡಿತು.
ಅವಾರ್ಡನ್ನು ಘಾಟ್ ಸ್ಟೇಯ ಪೌಂಡರ್ ಸುಜನ್ ಜೈನ್ ಹಾಗೂ ಅವರ ತಾಯಿ ಜಯಲೀಲ ಅವರು ಸ್ವೀಕರಿಸಿದರು.
ಸುಜನ್ ಜೈನ್ 19 ವರ್ಷದವರಾಗಿದ್ದು ಹೊರನಾಡು ಹೊಸನೆಲ ಮಂಜಪ್ಪ ಮತ್ತು ಜಯಲೀಲ ಅವರ ಪುತ್ರ. ಅತ್ಯಂತ ಕಿರಿಯ ವಯಸ್ಸಿನಲ್ಲಿ ಉತ್ತಮ ಸಾಧನೆ ಮಾಡಿ ಪ್ರಶಂಸೆಗೆ ಒಳಗಾಗಿದ್ದಾರೆ.ಶ್ರಮ ಪಟ್ಟು ಕೆಲಸ ಮಾಡಿದಾಗ ಜೀವನದಲ್ಲಿ ಯಾವತ್ತೂ ಸೋಲುವ ಮಾತೇ ಬರಲ್ಲ ಎಂದು ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.