ಕಳಸ ಲೈವ್ ವರದಿ.
ಕಳಸ ತಾಲೂಕು ವ್ಯಾಪ್ತಿಯ ಆರು ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಮೀಸಲು ನಿಗದಿ ಪಡಿಸಲಾಯಿತು.
1)ಮಾವಿನಕೆರೆ ಅಧ್ಯಕ್ಷ ಬಿಸಿಎಂ ಎ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, 2) ಸಂಸೆ ಅಧ್ಯಕ್ಷ ಪರಿಶಿಷ್ಠ ಜಾತಿ ಮಹಿಳೆ, ಉಪಾಧ್ಯಕ್ಷ ಬಿಸಿಎಂ ಎ ಮಹಿಳೆ. 3) ಹೊರನಾಡು ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ. 4) ತೋಟದೂರು ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಪರಿಶಿಷ್ಠ ಜಾತಿ ಮಹಿಳೆ. 5) ಮರಸಣಿಗೆ ಅಧ್ಯಕ್ಷ ಪರಿಶಿಷ್ಠ ಜಾತಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ. 6) ಇಡಕಣಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಪರಿಶಿಷ್ಠ ಪಂಗಡ ಮಹಿಳೆ.
ಕಳಸ ಕೆಪಿಎಸ್ ಶಾಲಾ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಮೀಸಲು ನಿಗದಿಪಡಿಸಲಾಯಿತು.ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ 30 ತಿಂಗಳ ಅವಧಿ ಮುಗಿದ ನಂತರ ಮತ್ತೊಮ್ಮೆ ಮೀಸಲಾತಿ ಮಾಡಲಾಗುವುದು.ಭಾರತ ಸರ್ಕಾರದ ಎನ್ಐಸಿ ತಂತ್ರಾಂಶ ಬಳಸಿ ಇಂಡೀಕರಣಗೊಳಿಸಿ ಮೀಸಲಾತಿ ನಿಗದಿಪಡಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ರೂಪ ತಿಳಿಸಿದರು.
ತಹಶೀಲ್ದಾರ್ ತನುಜಾ, ಚುನಾವಣಾ ಶಿರೆಸ್ಥೇದಾರ್ ಚಂದ್ರಶೇಖರ್ ಇತರರು ಇದ್ದರು.