ಕಳಸ ಲೈವ್ ವರದಿ
ಕಳಸ ಜೆ.ಸಿ.ಐ ಸಹಯೋಗದಲ್ಲಿ ದುರ್ಗಾ ಮಂಟಪದಲ್ಲಿ ನಡೆದ ಪುಷ್ಪಕ ಯಾನ ಎಂಬ ಏಕವ್ಯಕ್ತಿ ಯಕ್ಷಗಾನ ಕಾರ್ಯಕ್ರಮ ಯಕ್ಷ ಪ್ರೇಮಿಗಳ ಮನ ಗೆದ್ದಿದೆ.
ಝಿ ಕನ್ನಡ ಕಾಮಿಡಿ ಕಿಲಾಡಿ ಖ್ಯಾತಿಯ ಯಕ್ಷ ಹಾಸ್ಯ ಕಲಾವಿದ ಮಹಾಬಲೇಶ್ವರ ಭಟ್ ಕ್ಯಾದಗಿ ಯವರು ಎರಡು ಗಂಟೆಯಲ್ಲಿ ಒಂದು ಪುರಾಣ ಕಥೆಯನ್ನು ರಂಜನಾತ್ಮಕವಾಗಿ ಹೇಳುವ ಒಂದು ಹೊಸ ಪ್ರಯೋಗ ಕಳಸದಲ್ಲಿ ನಡೆಯಿತು.
ಪ್ರಸಂಗದಲ್ಲಿ ಬರುವ ಪಾತ್ರಕ್ಕನುಗುಣವಾಗಿ ಕ್ಷಣ ಮಾತ್ರದಲ್ಲಿ ಏಕ ವ್ಯಕ್ತಿ ತನ್ನ ವೇಷವನ್ನು ಬದಲಾವಣೆ ಮಾಡಿ ಅ ಪಾತ್ರಕ್ಕೆ ಜೀವ ತುಂಬುತ್ತಿರುವುದು ನಿಜಕ್ಕೂ ಅಚ್ಚರಿ ತರಿಸಿತು.
ಬದಲಾದ ಕಾಲದಲ್ಲಿ ಯಕ್ಷಗಾನದಲ್ಲೂ ವಿಭಿನ್ನ ರೀತಿಯ ಬದಲಾವಣೆಯೊಂದಿಗೆ ಯಕ್ಷಗಾನವನ್ನು ಪ್ರದರ್ಶನ ಮಾಡಿದ ಕಲಾವಿದನ ಜಾಣ್ಮೆಯನ್ನು ನೆರೆದಿದ್ದ ನೂರಾರು ಯಕ್ಷಪ್ರೇಮಿಗಳು ಪ್ರಶಂಸೆ ವ್ಯಕ್ತಪಡಿಸಿದರು.