ಕಳಸ ಲೈವ್ ವರದಿ
ಕಳಸ ಬಿ.ವಿ.ರವಿ ರೈ ನಿರ್ಮಾಣದ “ಟೋಬಿ” ಚಲನಚಿತ್ರ ಆಗಸ್ಟ್ 25 ರಂದು ತೆರೆಗೆ ಬರಲಿದೆ.
ಟೋಬಿ ಚಿತ್ರಕ್ಕೆ ಮಾರಿ ಮಾರಿ..ಮಾರಿಗೆ ದಾರಿ ಎಂಬ ಅಡಿ ಬರಹವಿದೆ..ರಿಲೀಸ್ ಡೇಟ್ ಘೋಷನೆ ಜೊತೆಗೆ ಒಂದು ಮೋಷನ್ ಪೋಸ್ಟರ್ ಸಹ ಬಿಡುಗಡೆ ಮಾಡಿದೆ.
ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿ ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದ ಕಮರ್ಷಿಯಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ಚಿತ್ರದಲ್ಲಿ ಅವರಿಗೆ ಇಬ್ಬರು ನಾಯಕಿಯರಂತೆ ಒಬ್ಬರು ಸಂಯುಕ್ತಾ ಹೋರ್ನಾಡ್ ಮತ್ತೊಬ್ಬರು ಚೈತ್ರಾ ಬಿ ಆಚಾರ್ ಅಭಿನಯಿಸಿದ್ದಾರೆ.ಗೋಪಾಲ ಕೃಷ್ಣ ದೇಶಪಾಂಡೆ, ದೀಪಕ್ ರಾಜ್ ಶೆಟ್ಟಿ, ಅಶ್ವಿನಿ ಹಾಸನ್ ಮುಂತಾದವರು ಟೋಬಿ ತಾರಾಗಣದಲ್ಲಿದ್ದಾರೆ.
ಲೈಟರ್ ಬುದ್ಧ ಫಿಲಂಸ್, ಅಗಸ್ತ್ಯ ಫಿಲ್ಮ್ಸ್ ಹಾಗೂ ಕಾಫಿ ಗ್ಯಾಂಗ್ ಸ್ಟುಡಿಯೋ ಲಾಂಛನದಲ್ಲಿ ನಿರ್ಮಾಣವಾಗಿದೆ.ಕಳಸದ ರವಿ ರೈ ನಿರ್ಮಾಪಕರು.ಶಾಮಿಲ್ ಬಂಗೇರ ಕಾರ್ಯಕಾರಿ ನಿರ್ಮಾಪಕರು.ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯು ಟೋಬಿ ವಿತರಣೆ ಮಾಡುತ್ತಿದೆ.ಬೆಲ್ ಬಾಟಂ ಕಥೆಗಾರ ಟಿ.ಕೆ. ದಯಾನಂದ್ ಟೋಬಿ ಸಿನಿಮಾಕ್ಕೂ ಕೆಲಸ ಮಾಡಿದ್ದಾರೆ.