ಕಳಸ ಲೈವ್ ವರದಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಳಸ ತಾಲೂಕು ,ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಚಿಕ್ಕಮಗಳೂರು,ನವಜೀವನ ಸಮಿತಿಗಳು,ಶೌರ್ಯ ವಿಪತ್ತು ನಿರ್ವಹಣಾ ಘಟಕಗಳು ಕಳಸ ತಾಲ್ಲೂಕು, ಇವುಗಳ ಸಂಯುಕ್ತ ಆಶ್ರಯದಲ್ಲಿ ಕಳಸ ಮಹಾವೀರ ಸಭಾಭವನದಲ್ಲಿ ನವಜೀವನೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿರುವ ಅರವಿಂದ ಸೋಮಯಾಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ನಿರ್ದೇಶಕರಾದ ಪ್ರಕಾಶ್ ರಾವ್, ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸುಜಯಾ ಸದಾನಂದ, ಸರ್ವೋದಯ ಜೈನ ತೀರ್ಥ ಸಮಿತಿ. ಕಳಸ ಇದರ ಅಧ್ಯಕ್ಷ ಬ್ರಹ್ಮದೇವ, 388ನೇ ಮದ್ಯವರ್ಜನಾ ಶಿಬಿರ ವ್ಯವಸ್ಥಾಪನ ಸಮಿತಿ. ಕಳಸ ಇದರ ಅಧ್ಯಕ್ಷ ಎಂ. ಎ. ಶೇಷಗಿರಿ, 785ನೇ ಮದ್ಯವರ್ಜನಾ ಶಿಬಿರ ವ್ಯವಸ್ಥಾಪನ ಸಮಿತಿ, ಸಂಸೆ ಇದರ ಅಧ್ಯಕ್ಷ ಕೆ. ಸಿ. ಧರಣೆಂದ್ರ ಇದ್ದರು.
ಜನಜಾಗೃತಿ ವೇದಿಕೆ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ನಾಗರಾಜ ಕುಲಾಲ್, ನವಜೀವನ ಸದಸ್ಯರು & ವಿಪತ್ತು ಘಟಕದ ಸದಸ್ಯರಿಗೆ ಮಾರ್ಗದರ್ಶನ ನೀಡಿದರು. ತಾಲೂಕು ಯೋಜನಾಧಿಕಾರಿ ಶ್ರೀ ಸುರೇಶ್ ಎಲ್ಲರನ್ನು ಸ್ವಾಗತಿಸಿದರು, ಕಾರ್ಯಕ್ರಮವನ್ನು ಆರೋಗ್ಯ ಸಹಾಯಕಿ ಶ್ರೀಮತಿ ಸೌಮ್ಯ, ಹರೀಶ್.ಕೆ ನಿರೂಪಿಸಿದರು, ಶ್ರೀನಿವಾಸ್ ಗೌಡ ವಂದನಾರ್ಪಣೆ ಮಾಡಿದರು. ನವ ಜೀವನ ಸಮಿತಿ ಸದಸ್ಯರು ಶೌರ್ಯ ವಿಪತ್ತು ಘಟಕದ ಸ್ವಯಂಸೇವಕರು , ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು..