ಕಳಸ ಲೈವ್ ವರದಿ
ಕಳಸ ಕಲಶೇಶ್ವರ ಸ್ವಾಮಿ ಮತ್ತು ಪರಿವಾರ ದೇವರುಗಳ ಜೀರ್ಣ ಅಷ್ಟಬಂಧ ಬ್ರಹ್ಮಕಲಶೋತ್ಸವ ಇದೇ ಬುಧವಾರದಿಂದ ಶುಕ್ರವಾರದವರೆಗೆ ನಡೆಯಲಿದ್ದು, ಬರದ ಸಿದ್ದತೆಗಳು ನಡೆಯುತ್ತಿದೆ.
ಜೀರ್ಣ ಅಷ್ಠ ಬಂಧ ಹಿನ್ನಲೆಯಲ್ಲಿ ದೇವಸ್ಥಾನವನ್ನು ಸಂಪೂರ್ಣ ಸ್ವಚ್ಚಗೊಳಿಸಲಾಗುತ್ತಿದ್ದು, ದೇವಾಲಯದ ಪುಷ್ಕರಣಿಯ ಸ್ವಚ್ಚತೆಯು ನಡೆಯುತ್ತಿದೆ.ಕಳೆದ ಕೆಲ ದಿನಗಳಿಂದ ಕಲ್ಯಾಣ ಮಂಟಪದ ಸ್ವಚ್ಚತೆ ಮತ್ತು ಸುಣ್ಣಬಣ್ಣದ ಕಾರ್ಯ ನಡೆಯುತ್ತಿದೆ. ದೇವಸ್ಥಾನದ ಆವರಣದ ಸ್ವಚ್ಚತೆ, ಜರಿದು ಹೋಗಿದ್ದ ಕಟ್ಟೆಯ ದುರಸ್ಥಿ ಕಾರ್ಯ ನಡೆಯುತ್ತಿದೆ.
ಜೂ 7ರಂದು ಗಿರಿಜಾಂಬಾದೇವರ ಸನ್ನಿಧಿಯಲ್ಲಿ ಜೀರ್ಣ ಅಷ್ಟಬಂಧ, ಬ್ರಹ್ಮ ಕುಂಭಾಭಿμÉೀಕ ನೆರವೇರಲಿದೆ. ಜೂ 8ರಂದು ಆನೆವಿಘ್ನೇಶ್ವರ ಸ್ವಾಮಿ ಮತ್ತು ಸವಾರ್ಂಗಸುಂದರಿ ಅಮ್ಮನ ಸನ್ನಿಧಿಯಲ್ಲಿ ಜೀರ್ಣ ಅಷ್ಟಬಂಧ, ಬ್ರಹ್ಮಕುಂಭಾಭಿμÉೀಕ, ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಲಿದೆ.
ಜೂ 9ರ ಶುಕ್ರವಾರ ಬೆಳಿಗ್ಗೆ 11.55ಕ್ಕೆ ಶೃಂಗೇರಿ ಶಾರದಾ ಪೀಠದ ವಿಧುಶೇಖರ ಸ್ವಾಮೀಜಿ ಕಳಸೇಶ್ವರ ಸ್ವಾಮಿ ಮತ್ತು ಪರಿವಾರ ದೇವರಿಗೆ ಜೀರ್ಣ ಅಷ್ಟಬಂಧ ಮತ್ತು ಬ್ರಹ್ಮಕುಂಭಾಭಿμÉೀಕ ನೆರವೇರಿಸಲಿದ್ದಾರೆ.
ಆನಂತರ 12.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ವಿಧುಶೇಖರ ಸ್ವಾಮೀಜಿ ಉಪನ್ಯಾಸ ನೀಡಲಿದ್ದಾರೆ.ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕಿ ನಯನಾ ಮೋಟಮ್ಮ, ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಸದಸ್ಯ ಎಸ್.ಎಲ್. ಭೋಜೇಗೌಡ, ಜಿ.ಭೀಮೇಶ್ವರ ಜೋಷಿ ಭಾಗವಹಿಸಲಿದ್ದಾರೆ.
ಅಂದು ಸಂಜೆ 6 ಗಂಟೆಗೆ ಓಂ ನಮಃ ಶಿವಾಯ ಎಂಬ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ. ಜೂ 7ರಂದು ಸಂಜೆ 6ರವರೆಗೆ ದೇವಸ್ಥಾನಕ್ಕೆ ಹಸಿರು ಕಾಣಿಕೆ ಅರ್ಪಿಸಲು ಅವಕಾಶ ಇದೆ ಎಂದು ದೇವಸ್ಥಾನದ ವ್ಯಸವ್ಥಾಪನಾ ಸಮಿತಿ ಅಧ್ಯಕ್ಷ ವೆಂಕಟಸುಬ್ಬಯ್ಯ ತಿಳಿಸಿದ್ದಾರೆ.