ಕಳಸ ಲೈವ್ ವರದಿ
ಒಡಿಸ್ಸಾದಲ್ಲಿ ರೈಲು ಅಪಘಾತಕ್ಕೀಡಾಗಿ ನೂರಾರು ಜನ ಬಲಿ ತೆಗೆದುಕೊಂಡ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಕಳಸ 110 ಜನರು ಸೇಫ್ ಆಗಿದ್ದಾರೆ.
ಕಳಸ, ಹೊರನಾಡು, ಸಂಸೆ ಭಾಗಗಳಿಂದ 110 ಜನ ಜೈನ ಸಮುದಾಯದವರು ಶ್ರೀ ಕ್ಷೇತ್ರ ಸಮ್ಮೇದ ಗಿರಿಗೆ ತೀರ್ಥಯಾತ್ರೆಯನ್ನು ಬುಧವಾರ ಸಂಜೆ ಕಳಸದಿಂದ ಯಾತ್ರೆ ಕೈಗೊಂಡಿದ್ದರು.ಗುರುವಾರ ಬೆಂಗಳೂರಿನಿಂದ ಬೆಳಿಗ್ಗೆ 10.30ಗೆ ಹೌರಾ ಎಕ್ಸಪ್ರೆಸ್ಸ್ ನಲ್ಲಿ ಪ್ರಯಾಣವನ್ನು ಬೆಳೆಸಿದ್ದರು.
ರೈಲಿನ ಕೊನೆಯ ಮೂರು ಬೋಗಿ ಎಸ್5, ಎಸ್6,ಎಸ್7 ಬೋಗಿಯಲ್ಲಿ ಪ್ರಯಾಣವನ್ನು ಬೆಳೆಸಿದ್ದರು.ಮಧ್ಯಾಹ್ನ ವಿಶಾಖಪಟ್ಟಣದ ಬಳಿ ಇಂಜಿನ್ ಬದಲಾವಣೆ ಆಗಿತ್ತು.ಇಂಜಿನ್ ಬದಲಾವಣೆ ಮಾಡಿದ ಸಂದರ್ಭದಲ್ಲಿ ಅವರು ಮೊದಲ ಮೂರು ಬೋಗಿಗೆ ಶಿಪ್ಟ್ ಆಗಿದ್ದರು.ರಾತ್ರಿ ಸರಕು ಸಾಗಾಣೆ ರೈಲು ಮತ್ತು ಹೌರ ಎಕ್ಸ್ ಪ್ರೆಸ್ಸ್ ಮಧ್ಯೆ ಒಡಿಸ್ಸಾದ ಬಾಲಸೋರ್ನಲ್ಲಿ ಅಪಘಾತವಾಗಿದೆ.ಅದು ಕೊನೆಯ ಬೋಗಿಗಳಿಗೆ ಅಫಘಾತವಾಗಿರುವ ಹಿನ್ನಲೆಯಲ್ಲಿ ಮೊದಲನೇ ಬೋಗಿಗೆ ಶಿಪ್ಟ್ ಆಗಿದ್ದ ಕಳಸದ ಅಷ್ಟೂ ಜನರು ಯಾವುದೇ ತೊಂದರೆ ಇಲ್ಲದೆ ಪಾರಗಿದ್ದಾರೆ.
ಈ ಬಗ್ಗೆ ತೀರ್ಥ ಕ್ಷೇತ್ರಕ್ಕೆ ಪ್ರಯಾಣ ಬೆಳಿಸಿದ್ದ ಅಜಿತ್ ಹೊರನಾಡು ದೂರವಾಣಿ ಮುಖಾಂತರ ಮತನಾಡಿ ಅಪಘಾತವಾದ ರೈಲಿನಲ್ಲೆ ನಾವು ಇದ್ದೆವು ಇಂಜಿನ್ ಬದಲಾವಣೆ ಆದ ಸಂದರ್ಭದಲ್ಲಿ ನಾವು ಮೊದಲ ಮೂರು ಬೋಗಿಗೆ ಬಂದಿರುವುದರಿಂದ ಸೇಫ್ ಅಗಿದ್ದೇವೆ.ಯಾರೂ ಭಯ ಪಡುವ ಅಗತ್ಯ ಇಲ್ಲ.ನಾವು ಎಲ್ಲರೂ ಆರಾಮವಾಗಿದ್ದೇವೆ. ನಾವು ಮತ್ತೆ ಪ್ರಯಾಣ ಬೆಳೆಸಿದ್ದೇವೆ.ನಾವು ಯಾತ್ರೆ ಮುಗಿಸಿಯೇ ವಾಪಾಸು ಬರಲಿದ್ದೇವೆ ಎಂದು ತಿಳಿಸಿದ್ದಾರೆ.