ಕಳಸ ಲೈವ್ ವರದಿ
ಕಳಸದಲ್ಲಿ ಭಾನುವಾರ ಸಂಜೆ ಮಳೆ ರಾಯನ ಆಗಮನದಿಂದ ಬಿಸಿಲ ಬೇಗೆಯಲ್ಲಿ ಬೆಂದ ಮಂದಿಗೆ ಹರ್ಷ ಉಂಟು ಮಾಡಿದೆ.ಸುರಿದ ಮಳೆಯಿಂದ ಬೇಸಗೆಯ ಕಾವು ಒಂದಷ್ಟು ತಗ್ಗಿದೆ, ಇಳೆ ತಂಪಾಗಿದೆ,ಮನಸ್ಸಿಗೂ ಹಿತವಾಗಿದೆ.
ಭಾನುವಾರ ಸಂಜೆಯಾಗುತ್ತಿದ್ದಂತೆ ಒಂದೇ ಸಮನೆ ಸುರಿದ ಗಾಳಿ ಮಳೆಗೆ ಕಳಸದಿಂದ ಕಂಚಿನಕೆರೆ ಹೋಗುವ ರಸ್ತೆಗೆ ಮರವೊಂದು ಬಿದ್ದು ಗ್ರಾಮಸ್ಥರು ತೊಂದರೆ ಅನುಭವಿಸಿದರು.ಮದುವೆ, ಗೃಹಪ್ರವೇಶ ಹಾಗೂ ಇನ್ನಿತರೆ ಕಾರ್ಯಕ್ರಮಗಳಿಗೆ ತೆರಳಿದ ಹಾಗೂ ಕಳಸ ಭಾಗಕ್ಕೆ ಭಾನುವಾರ ಸಾಕಷ್ಟು ಸಂಖ್ಯೆಯಲ್ಲಿ ಬಂದಿದ್ದ ಪ್ರವಾಸಿಗರು ಮಳೆಯ ಪರಿಣಾಮ ತೊಂದರೆ ಅನುಭವಿಸಿದರು.
ಕಾಫಿ,ಅಡಕೆ ಮುಂತಾದ ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿ ಬೇಕಾಗಿದ್ದ ಮಳೆ ಭಾನುವಾರದ ಮಳೆ ಸ್ವಲ್ಪ ಮಟ್ಟಿಗೆ ಕೃಷಿಕರಿಗೆ ನೆರವಾಯಿತು.