ಕಳಸ ಲೈವ್ ವರದಿ
ಶ್ರೀ ಕಲಶೇಶ್ವರಸ್ವಾಮಿ ಹಾಗೂ ಪರಿವಾರ ದೇವರುಗಳ ಅಷ್ಟಬಂಧ ಬ್ರಹ್ಮಕಲಶೋತ್ಸವದ 14ನೇ ವಾರ್ಷಿಕೋತ್ಸವ ಶುಕ್ರವಾರ ಮತ್ತು ಶನಿವಾರ ನಡೆಯಿತು.
ಶ್ರೀ ಕಲಶೇಶ್ವರಸ್ವಾಮಿ ಹಾಗೂ ಪರಿವಾರ ದೇವರುಗಳ ಅಷ್ಟಬಂಧ ಬ್ರಹ್ಮಕಲಶೋತ್ಸವವು 9-05-2009 ರಿಂದ 18-05-2009ರವರೆಗೆ ನಡೆದಿತ್ತು.ಈ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಬಂಧವಾಗಿ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಶುಕ್ರವಾರದಂದು ಕಲಶೇಶ್ವರಸ್ವಾಮಿ ದೇವಾಲಯಕ್ಕೆ ಸೇರಿದ ಪರಿವಾರ ದೇವರುಗಳಾದ ಶ್ರೀ ವಶಿಷ್ಠ ಗಣಪತಿ, ಕಾಲಭೈರವೇಶ್ವರ, ದುಗಾರ್ಂಬ ದೇವಾಲಯ, ಗಿರಿಜಾಂಬ ದೇವಾಲಯ ಹಾಗೂ ಬಿಂದುಮಾಧವ ದೇವಾಲಯಗಳಲ್ಲಿ ಪಂಚಾಮೃತ ಅಭಿμÉೀಕ ಮತ್ತು ತತ್ವ ಕಲಶಾಭಿμÉೀಕ ನಡೆಯಿತು.
ಶನಿವಾರ ಶ್ರೀ ಕಲಶೇಶ್ವರಸ್ವಾಮಿ, ಸವಾರ್ಂಗ ಸುಂದರಿ ಅಮ್ಮನವರ ಹಾಗೂ ಆನೆಗಣಪತಿ ದೇವರುಗಳ ಸನ್ನಿಧಿಯಲ್ಲಿ ಕಲಾತತ್ವ ಹೋಮ, ಕಲಶಾಭಿμÉೀಕ ನಡೆಯಿತು.
ಈ ಕಾರ್ಯಕ್ರಮಕ್ಕೆ ಕಳಸ ಸುತ್ತಮುತ್ತಲಿನ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.