ಕಳಸ ಲೈವ್ ವರದಿ
ಕಳಸ-ಕುದುರೆಮುಖ ರಸ್ತೆಯ ಕಾರಗದ್ದೆ ಎಂಬಲ್ಲಿ ಸೇತುವೆ ಮೇಲೆ ನಿಂತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.
ಕಾರಗದ್ದೆ ಸೇತುವೆಯ ಮೇಲೆ ಸಣ್ಣ ಮಳೆ ಬಂದರೂ ಕೂಡ ಮೊಣಕಾಲುದ್ದ ನೀರು ನಿಲ್ಲುತ್ತಿದ್ದು, ಇದು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ರಸ್ತೆಯ ಮೇಲ್ಬಾಗದಿಂದ ಮಣ್ಣಿನೊಂದಿಗೆ ಹರಿದು ಬರುವ ನೀರು ಸೇತುವೆ ಮೇಲೆ ಬಂದು ನಿಲ್ಲುತ್ತದೆ.ಇಲ್ಲಿ ಸೇತುವೆಯಿಂದ ನೀರು ಕೆಳಗೆ ಹರಿದು ಹೋಗಲು ಯಾವುದೇ ವ್ಯವಸ್ಥೆಯನ್ನು ಮಾಡದೆ ಇರುವ ಹಿನ್ನಲೆಯಲ್ಲಿ ಪ್ರತೀ ಸರಿ ಮಳೆ ಬಂದಾಗ ನೀರು ನಿಲ್ಲುತ್ತದೆ.
ಆದರೆ ಇದಕ್ಕೆ ಸಂಭಂದಪಟ್ಟ ಲೋಕೋಪಯೋಗಿ ಇಲಾಖೆಗೆ ಎಷ್ಟು ಭಾರಿ ಮನವಿ ಮಾಡಿದರೂ ಕೂಡ ಇದಕ್ಕೆ ಶಾಶ್ವತ ಪರಿಹಾರವನ್ನು ಕಲ್ಪಿಸದೆ ಇರುವ ಹಿನ್ನಲೆಯಲ್ಲಿ ಸಾರ್ವಜನಿಕರು ತೊಂದರೆ ಪಡುತ್ತಿದ್ದಾರೆ. ಕೂಡಲೇ ಈ ಸೇತುವೆ ಮೇಲೆ ನಿಲ್ಲುತ್ತಿರುವ ನೀರಿಗೆ ಶಾಶ್ವತ ಪರಿಹಾರ ಕಲ್ಪಿಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರಾದ ಆಗಸ್ಟೀನ್ ಒತ್ತಾಯಿಸಿದ್ದಾರೆ.