ಕಳಸ ಲೈವ್ ವರದಿ
ಶ್ರೀಕ್ಷೇತ್ರ ಹೊರನಾಡಿನಲ್ಲಿ ಅನ್ನಪೂಣೇಶ್ವರೀ ಅಮ್ಮನವರಿಗೆ ಮಹಾಕುಂಭಾಭಿಷೇಕ ಮತ್ತು ಶ್ರೀ ಅನ್ನಪೂರ್ಣಾ ಮೂಲಮಂತ್ರ ಹವನದ ಪೂರ್ಣಾಹುತಿಯು ಶೃಂಗೇರಿಯ ಪರಮಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ದಕ್ಷಣಾಮ್ನಾಯ ಶ್ರೀ ಶಾರದಾ ಪೀಠಾಧೀಶ್ವರರಾದ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಕರಕಮಲ ಸಂಜಾತರಾದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಗುರುವಾರ ನೆರವೇರಿತು.
ನೂತನವಾಗಿ ನಿರ್ಮಿಸಿರುವ ಜಗನ್ಮಾತೆಯ ಉತ್ಸವ ಮೂರ್ತಿ ಮತ್ತು ನೂತನ ಸೇವಾ ರಥದ ಲೋಕಾರ್ಪಣೆ ಹಾಗೂ ರಥೋತ್ಸವ ಕಾರ್ಯಕ್ರಮವನ್ನು ಪರಮಪೂಜ್ಯರ ಸಾನ್ನಿಧ್ಯ ದಲ್ಲಿ ಸಂಪನ್ನಗೊಂಡಿತು.ನಂತರ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಜಿ. ಭೀಮೇಶ್ವರ ಜೋಷಿಯವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಿತು ಈ ಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಅಶೋಕ್ ಹಾರ್ನಳ್ಳಿ ಹಾಗೂ ಶ್ರೀ ವಿ.ಆರ್. ಗೌರಿಶಂಕರ್ ಅವರು ಉಪಸ್ಥಿತರಿದ್ದರು, ಶ್ರೀಗಳು ನೆರೆದಿದ್ದ ಭಗವದ್ಭಕ್ತರಿಗೆ ಅಭಯಪೂರ್ವಕ ಆಶೀರ್ವಚನ ಹಾಗೂ ಆಶೀರ್ವಾದ ಮಂತ್ರಾಕ್ಷತೆಯನ್ನು ನೀಡಿದರು.