ಕಳಸ ಲೈವ್ ವರದಿ
ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯ ಹಲವು ದಿನದ ಕಸರತ್ತಿಗೆ ತೆರೆ ಬಿದ್ದಿದ್ದು ತಾಲ್ಲೂಕಿನ 9 ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿದೆ.ಮೇ 13ರ ಶನಿವಾರ ಸ್ಪಷ್ಟ ಜನಾದೇಶ ಹೊರಬೀಳಲಿದೆ.
ನೆನ್ನೆ ಮುಂಜಾನೆಯಿಂದ ಪ್ರಾರಂಭಗೊಂಡ ಮತದಾನ ಕಳಸ ತಾಲ್ಲೂಕಿನಲ್ಲಿ ಶೇ 74.33 ಮತದಾನದೊಂದಿಗೆ ಮುಕ್ತಾಯವಾಯಿತು.ಬಹಳ ಜಿದ್ದಾಜಿದ್ದಿನಿಂದ ಕೂಡಿದ ತಾಲ್ಲೂಕಿನ ತಮ್ಮ ನೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಬಹಳ ಹುರುಪಿನಿಂದ ಮತಗಟ್ಟೆಯ ಬಳಿ ಕರ್ಯನಿರ್ವಹಿಸುತ್ತಿದ್ದದ್ದು ಕಂಡು ಬಂತು.
ತಾಲ್ಲೂಕಿನಲ್ಲಿ ಶಾಂತಿಯುತವಾಗಿ ಮತದಾನವಾಗಿದ್ದು, ಹೊರನಾಡು ಮತಗಟ್ಟೆ 11ರಲ್ಲಿ ಸಂಜೆ ಮತಯಂತ್ರ ಕೈಗೊಟ್ಟು ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಕಳಸ ಮತಗಟ್ಟೆ 27ರಲ್ಲಿ ಒಂದೇ ಹೆಸರಿನ ಇಬ್ಬರು ಮತದಾರರು ಬಂದಿದ್ದು,ಇಬ್ಬರಿಗೂ ಅವಕಾಶ ನೀಡಲಾಗಿದೆ.ಮೊದಲು ಮತದಾನ ಮಾಡಿದವರಿಗೆ ವಿದ್ಯುನ್ಮಾನ ಯಂತ್ರದಲ್ಲಿ ಮತದಾನ ಮಾಡಿದರೆ,ಎರಡನೇ ಬಾರಿ ಬಂದವರಿಗೆ ಬ್ಯಾಲೆಟ್ ಪೇಪರ್ ನಲ್ಲಿ ಅವಕಾಶ ಮಾಡಿಕೊಟ್ಟು ಗೊಂದಲಕ್ಕೆ ತೆರೆ ಎಳೆದಿದ್ದಾರೆ.ಮಧ್ಯಾಹ್ನದ ಮೇಲೆ ಮಳೆ ಬಂದ ಪರಿಣಾಮ ಮತದಾರರಿಗೆ ತೊಂದರೆ ಉಂಟಾಯಿತು.
ಕಳಸ ತಾಲ್ಲೂಕಿನಲ್ಲಿ ಶೇ 74.33 ಮತದಾನವಾಗಿದೆ.ಒಟ್ಟು 25269 ಮತದಾರರಿದ್ದು, 18782 ಮತದಾನವಾಗಿದೆ.