ಕಳಸ ಲೈವ್ ವರದಿ
ತಾಲ್ಲೂಕಿನ ಜೆಇಎಂ ಆಂಗ್ಲ ಮಾಧ್ಯಮ ಶಾಲೆ ಶೇ.100 ಫಲಿತಾಂಶ ಗಳಿಸಿದೆ.
ಪರೀಕ್ಷೆ ಬರೆದಿದ್ದ ಎಲ್ಲ 48 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ.619 ಅಂಕ ಗಳಿಸಿದ ಅದಿತಿ ಪಿ. ಜೈನ್ ತಾಲ್ಲೂಕಿಗೆ ಅಗ್ರಸ್ಥಾನ ಗಳಿಸಿದ್ದಾಳೆ.610 ಅಂಕ ಗಳಿಸಿದ ಕ್ಷಿತಿ ಕೊಡ್ಸರ, 609 ಗಳಿಸಿದ ಸೃಷ್ಟಿ ಮತ್ತು ಅಹನ್ ನಂತರದ ಸ್ಥಾನದಲ್ಲಿದ್ದಾರೆ ಎಂದು ಮುಖ್ಯೋಪಾಧ್ಯಾಯ ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಪ್ರಬೋಧಿನಿ ವಿದ್ಯಾ ಕೇಂದ್ರಕ್ಕೆ ಶೇ.98 ಪಲಿತಾಂಶ ಬಂದಿದೆ. ಪ್ರಬೋಧಿನಿ ವಿದ್ಯಾಕೇಂದ್ರದ 53 ವಿದ್ಯಾರ್ಥಿಗಳ ಪೈಕಿ ಒಬ್ಬ ಅನುತ್ತೀರ್ಣನಾಗಿದ್ದು ಶಾಲೆ ಶೇ.98 ಫಲಿತಾಂಶ ಪಡೆದಿದೆ. 618 ಅಂಕ ಗಳಿಸಿ ಚಿಂತನ ಡಿ.ಜೈನ್ ಅಗ್ರಸ್ಥಾನ ಪಡೆದಿದ್ದಾಳೆ. ರಮ್ಯಾ ಪೈ 616 ಮತ್ತು 600 ಅಂಕ ಗಳಿಸಿದ ಸಾನಿಕ ಕೆ.ಬಿ ನಂತರದ ಸ್ಥಾನ ಗಳಿಸಿದ್ದಾರೆ ಎಂದು ಮುಖ್ಯೋಪಾಧ್ಯಾಯ ಆನಂದ್ ತಿಳಿಸಿದ್ದಾರೆ.
ಕೆಪಿಎಸ್ ಶಾಲೆಗೆ ಶೇ.86: ಕಳಸ ಕೆಪಿಎಸ್ ಶಾಲೆಯ 108 ವಿದ್ಯಾರ್ಥಿಗಳ ಪೈಕಿ 93 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದು ಶಾಲೆಯು ಶೇ.86 ಫಲಿತಾಂಶ ಪಡೆದಿದೆ. ಶಾಲೆಯ ಇಂಗ್ಲೀμï ಮಾಧ್ಯಮವು ಶೇ.100 ಫಲಿತಾಂಶ ಗಳಿಸಿದೆ.15 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆ ಪಡೆದಿದ್ದಾರೆ.590 ಅಂಕ ಗಳಿಸಿದ ಹೊರನಾಡಿನ ವಿದ್ಯಾರ್ಥಿ ಹೆಚ್.ಎಸ್.ರಿಶಿತ್ ಮೊದಲ ಸ್ಥಾನ ಗಳಿಸಿದ್ದಾನೆ. 589 ಅಂಕ ಗಳಿಸಿದ ಝಕಿಯಾ ಎರಡನೇ ಸ್ಥಾನ ಗಳಿಸಿದ್ದಾಳೆ ಎಂದು ಶಿಕ್ಷಕ ಸಂದೇಶ್ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ಸಂಸೆ ಸರ್ಕಾರಿ ಪ್ರೌಢಶಾಲೆಯ 29 ವಿದ್ಯಾರ್ಥಿಗಳ ಪೈಕಿ 25 ಮಂದಿ ತೇರ್ಗಡೆ ಆಗಿದ್ದು ಶಾಲೆ 86 ಫಲಿತಾಂಶ ಗಳಿಸಿದೆ.550 ಅಂಕ ಪಡೆದ ಸಿಂಚನ ಅಗ್ರಸ್ಥಾನ ಗಳಿಸಿದ್ದಾಳೆ.
ಹಿರೇಬೈಲ್ ಸೇಕ್ರೆಡ್ ಹಾರ್ಟ್ ಶಾಲೆಯು ಶೇ.83 ಫಲಿತಾಂಶ ಗಳಿಸಿದೆ.ಶ್ರೀದೇವಿ 558 ಅಂಕ ಮತ್ತು ನಮ್ರತಾ 555 ಅಂಕ ಗಳಿಸಿದ್ದಾರೆ. ಕುದುರೆಮುಖ ಸರ್ಕಾರಿ ಶಾಲೆಯು ಶೇ.83, ಹಿರೇಬೈಲ್ ಸರ್ಕಾರಿ ಪ್ರೌಢಶಾಲೆ ಶೇ.84 ಮತ್ತು ಬಾಳೆಹೊಳೆ ಶಾಲೆಯು ತಾಲ್ಲೂಕಿನಲ್ಲಿ ಕನಿಷ್ಟ ಎನಿಸಿದ ಶೇ.73 ಫಲಿತಾಂಶ ಮಾತ್ರ ಪಡೆದಿದೆ.