ಕಳಸ ವೈವ್ ವರದಿ
ಈ ಹಿಂದಿನ ಶಾಸಕರ ದುರಾಡಳಿತ, ಬ್ರಷ್ಟಾಚಾರದಿಂದ ಕ್ಷೇತ್ರದ ಮತದಾರರು ಬೇಸೆತ್ತು ಹೋಗಿದ್ದಾರೆ. ಕಳಸದ ಯಾವುದೇ ಸಮಸ್ಯೆಗಳಿಗೂ ಸ್ಪಂದಿಸಿಲ್ಲ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಕಳಸ ತಾಲ್ಲೂಕಿನಾಧ್ಯಂತ ಗುರುವಾರ ಮತ್ತು ಶುಕ್ರವಾರ ಮೂಡಿಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಪರ ಮತಯಾಚನೆ ಮಾಡಿ ನಂತರ ಮಾತನಾಡಿದ ಅವರು, ಹಿಂದಿನ ಶಾಸಕರು ಕಳಸ ತಾಲ್ಲೂಕು ಕೇಂದ್ರದ ಘೋಷನೆ ಆಗ ಬಾರದು ಎಂದು ಒತ್ತಾಯ ಮಾಡಿದ್ದರು. ಇನಾಂ ಭೂಮಿ ಸಮಸ್ಯೆಯ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಒತ್ತುವರಿ ಸಮಸ್ಯೆ ಬಗ್ಗೆ ಎಲ್ಲಿಯೂ ಚಕಾರನೇ ಎತ್ತಿಲ್ಲ. ಕುದುರೆಮುಖ ಕಂಪೆನಿ ಮುಚ್ಚುಕಡೆಯಾದ ನಂತರದಲ್ಲಿ ಅದನ್ನು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಬಳಸಿಕೊಳ್ಳಬಹುದಿತ್ತು. ಇದಕ್ಕೆ ಯಾವುದೇ ಪ್ರಯತ್ನನೇ ಮಾಡಲಿಲ್ಲ. ಕಳಸ ಭಾಗದ ರಸ್ತೆಗಳ ಅಭಿವೃದ್ದಿಗೆ ಗಮನ ಕೊಡಲಿಲ್ಲ. ಆಸ್ಪತ್ರೆಗೆ ಒಬ್ಬ ಸಮರ್ಥ ವೈದ್ಯರನ್ನು ನೇಮಕ ಮಾಡಲು ಸಾಧ್ಯವಾಗಲಿಲ್ಲ. ಕೇವಲ ಬ್ರಷ್ಟಾಚಾರ, ದುರಾಡಳಿತದಲ್ಲಿ ಕಾಲ ಕಳೆದ ಈ ಹಿಂದಿನ ಶಾಸಕರಿಂದ ಕ್ಷೇತ್ರದ ಜನ ಬೇಸೆತ್ತು ಹೋಗಿದ್ದರು.
ಆದರೆ ಈಗ ದೀಪಕ್ ದೊಡ್ಡಯ್ಯನಂತ ಒಬ್ಬ ವಿದ್ಯಾವಂತ, ಸಮರ್ಥ ಮತ್ತು ಪ್ರಾಮಾಣಿಕ ಅಭ್ಯರ್ಥಿಯನ್ನು ಬಿಜೆಪಿ ಆಯ್ಕೆ ಮಾಡಿ ಕಣಕ್ಕಿಳಿಸಿದೆ.ಇದರಿಂದ ಎಲ್ಲರಲ್ಲೂ ಉತ್ಸಾಹ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಂ.ಎ.ಶೇಷಗಿರಿ, ನಾಗಭೂಷನ್, ನಾಗೇಶ್ ಭಟ್, ಶಶಿಧರ್, ಶ್ರೀಕಾಂತ್, ಬಿ.ಕೆ. ಮಹೇಶ್, ಶಿವರಾಮ್, ರಂಗನಾಥ್, ಕಾರ್ತಿಕ್ ಶಾಸ್ತ್ರಿ ಇತರರು ಇದ್ದರು.