ಕಳಸ ಲೈವ್ ವರದಿ
ಮೂಡಿಗೆರೆ ಕ್ಷೇತ್ರದ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿ ನಯನಾ ಮೋಟಮ್ಮ ತಾಲ್ಲೂಕಿನಾದ್ಯಂತ ಮಂಗಳವಾರ ಚುನಾವಣಾ ಪ್ರಚಾರ ನಡೆಸಿದರು.
ಮಂಗಳವಾರ ಬೆಳಿಗ್ಗೆ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನ ಪಡೆದು ಚುನಾವಣಾ ಪ್ರಚಾರ ಆರಂಭಿಸಿದ ನಯನಾ ಮೋಟಮ್ಮ ಕಳಸ, ಸಂಸೆ, ಕುದುರೆಮುಖ, ಬಾಳಗಲ್, ಮುಳ್ಳೋಡಿ, ಜಾಂಬಳೆ, ಕಲ್ಮಕ್ಕಿ ಪ್ರದೇಶದಲ್ಲಿ ಮತದಾರರನ್ನು ಭೇಟಿ ಮಾಡಿ ಮತ ಯಾಚಿಸಿದರು.
ಬುಧವಾರ ಹೆಮ್ಮಕ್ಕಿ, ಬೂದಿಗುಂಡಿ, ಕೋಟೆಮಕ್ಕಿ, ಬಾಳೆಹೊಳೆ, ಭದ್ರಾಸೈಟ್, ಕೆ.ಕೆಳಗೂರು, ತನುಡಿ, ತೋಟದೂರು, ಹಿರೇಬೈಲು, ಮರಸಣಿಗೆ ಗ್ರಾಮಗಳಲ್ಲಿ ಮತಯಾಚನೆ ಮಾಡಲಿದ್ದಾರೆ.
ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ, ಮುಖಂಡರಾದ ಹಿತ್ತಲಮಕ್ಕಿ ರಾಜೇಂದ್ರ, ರಫೀಕ್, ವಿಶ್ವನಾಥ್ ಇದ್ದರು.