ಕಳಸ ಲೈವ್ ವರದಿ
ಇಲ್ಲಿಯ ಕಚಗಾನೆ ಕಲ್ಲಾಟಗುಡ್ಡದಲ್ಲಿ ದೈವರಾಜ ಭಗವಾನ್ ಶ್ರೀ ಬಬ್ಬುಸ್ವಾಮಿ ಮತ್ತು ಶ್ರೀ ಚಾಮುಂಡೇಶ್ವರಿ ಪರಿವಾರ ದೈವಗಳ ನೇಮೋತ್ಸವವು ಇದೇ ತಿಂಗಳ 15 ಮತ್ತು 16 ರಂದು ನಡೆಯಲಿದೆ.
ಎ 15 ಶನಿವಾರದಂದು ಬೆಳಿಗ್ಗೆ ಕಂಬಿಗಾರ ದೇವರ ದರ್ಶನ, ದ್ವಜಾರೋಹಣ ಮಧ್ಯಾಹ್ನ ಚಪ್ಪರ ಏರುವುದು, ಸಂಜೆ ಭಂಡಾರ ಇಳಿಯುವುದು ರಾತ್ರಿ ಶ್ರೀ ಬಬ್ಬುಸ್ವಾಮಿ ಗಾಗೂ ತನಿಮನಿಗ ದೈವದ ನೇಮೋತ್ಸವ ನಡೆಯಲಿದೆ.
ಎ 16 ಭಾನುವಾರ ಮಧ್ಯಾಹ್ನ ಶ್ರೀ ಚಾಮುಂಡೇಶ್ವರಿ ಪರಿವಾರ ದೈವಗಳ ನೇಮೋತ್ಸವ ನಂತರ ಹೇಳಿಕೆ. ಸಂಜೆ ಧೂಮಾವತಿ ಹಾಗೂ ಬಂಟ ದೈವದ ನೇಮೋತ್ಸವ ನಡೆಯಲಿದೆ.