ಕಳಸ ಲೈವ್ ವರದಿ
ಕಳಸ ಪಟ್ಟಣದ ಅಂಗಡಿ, ಹೋಟೆಲ್ ಹಾಗೂ ವಿವಿಧ ವ್ಯಾಪರಸ್ಥರು ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ಸ್ವಚ್ಚವಾಹಿನಿಗೆ ಹಾಕದೆ ಎಲ್ಲೆಂದರಲ್ಲಿ ಬಿಸಾಡಿದರೆ ಅಂತವರಿಗೆ ದಂಡ ವಿಧಿಸಲಾಗುವುದು ಎಂದು ಕಳಸ ಗ್ರಾಮ ಪಂಚಾಯಿತಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.
ಪಂಚಾಯಿತಿ ವ್ಯಾಪ್ತಿಯ ಅಂಗಡಿ ಹಾಗೂ ಹೋಟೆಲ್ ಮಾಲಿಕರು ಹಾಗು ವಿವಿಧ ವ್ಯಾಪಾರಸ್ಥರಿಗೆ ಈಗಾಗಲೇ ಹಸಿ ಮತ್ತು ಒಣ ಕಸಕ್ಕಾಗಿ ಬುಟ್ಟಿಗಳನ್ನು ವಿತರಿಸಿದ್ದರೂ ಸಹ ಕಸದ ಬುಟ್ಟಿಗೆ ಕಸವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಮತ್ತು ಅಂಗಡಿಗಳ ಕಸವನ್ನು ಸ್ವಚ್ಚಗೊಳಿಸಿ ರಸ್ತೆಗೆ ಹಾಗೂ ಚರಂಡಿಗೆ ಹಾಕುವುದು ಕಂಡು ಬರುತ್ತಿದೆ. ಈ ಬಗ್ಗೆ ಹಲವಾರು ಬಾರಿ ಗಮನಕ್ಕೆ ತಂದರೂ ಕೂಡ ಮತ್ತದೇ ಪುನಾರಾವರ್ತನೆ ಆಗುತ್ತಿದೆ.
ಆದ್ದರಿಂದ ಮುಂದಿನ ದಿನಗಳಲ್ಲಿ ಈ ರೀತಿಯ ಕಸವನ್ನು ಕಸದ ಬುಟ್ಟಿಗಳಲ್ಲಿ ನಿರ್ವಹಣೆ ಮಾಡದೆ ರಸ್ತೆಗೆ ಹಾಕುವುದು ಮತ್ತು ಚರಂಡಿಗೆ ಹಾಕುವುದು ಕಂಡುಬಂದಲ್ಲಿ ಮೊದಲ ಬಾರಿಗೆ 500 ರೂ ಗಳ ದಂಡವನ್ನು ವಿಧಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.