ಕಳಸ ಲೈವ್ ವರದಿ
ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ವೇಳೆ ತುಮಕೂರಿನ ಪಾವಗಡದಿಂದ ಬರುತ್ತಿದ್ದ ಪಾರ್ಚೂನ್ ವಾಹನದಲ್ಲಿ ಪೊಲೀಸರ ತಪಾಸಣೆ ವೇಳೆ ದಾಖಲೆ ಇಲ್ಲದ 2 ಲಕ್ಷ ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಗುರುವಾರ ದಿನವೂ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಧರ್ಮಸ್ಥಳಕ್ಕೆ ಭಕ್ತರ ದಾಖಲೆರಹಿತ ರೂ 1ಲಕ್ಷ ಹಣ ಗುರುವಾರ ಪೊಲೀಸರು ವಶ ಪಡಿಸಿಕೊಂಡಿದ್ದರು.ಅದರ ಬೆನ್ನಲ್ಲೇ ಶುಕ್ರವಾರ ತುಮಕೂರು ಪಾವಗಡದ ವೈದ್ಯರೊಬ್ಬರು ತಮ್ಮ ಪಾರ್ಚೂನ್ ವಾಹನದಲ್ಲಿ ಧರ್ಮಸ್ಥಳ ಹಾಗೂ ಕಟೀಲು ದೇವಸ್ಥಾನಕ್ಕೆ ಹುಂಡಿ ಹಾಕಲು 2 ಲಕ್ಷ ಹಣ ಒಯ್ಯುತ್ತಿದ್ದ ವೇಳೆ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಹಣವನ್ನು ವಶಪಡಿಸಿಕೊಂಡು ವಾಹನವನ್ನು ಬಿಡಲಾಯಿತು. ನೀತಿ ಸಂಹಿತೆ ಜಾರಿ ಇದ್ದು 50 ಸಾವಿರಕ್ಕಿಂತ ಹೆಚ್ಚು ದಾಖಲೆಯಿಲ್ಲದ ಹಣವನ್ನು ಸಾಗಿಸಬಾರದೆಂಬ ನಿಯಮವಿದ್ದರೂ ಪ್ರವಾಸಿಗರು ನಿರ್ಲಕ್ಷ್ಯ ತೋರುತ್ತಿರುವುದು ಕಂಡು ಬರುತ್ತಿದೆ. ಶುಕ್ರವಾರ ಬಣಕಲ್ ಸಬ್ ಇನ್ ಸ್ಪೆಕ್ಟರ್ ಜಂಬೂರಾಜ್ ಮಹಾಜನ್,ಚುನಾವಣಾ ಅಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ವಾಹನ ತಪಾಸಣೆ ಮಾಡಿದಾಗ 2 ಲಕ್ಷ ಸಿಕ್ಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಎಎಸೈ ಟಿ.ಕೆ.ಶಶಿ,ಪೆÇಲೀಸ್ ಸಿಬ್ಬಂದಿಗಳಾದ ನಂದೀಶ್,ಸ್ವಾತಿ,ಚೆಕ್ ಪೆÇೀಸ್ಟ್ ಅರಣ್ಯ ಸಿಬ್ಬಂದಿಗಳಾದ ಪರಮೇಶ್, ಮಂಜುನಾಥ್ ಇದ್ದರು.