ಕಳಸ ಲೈವ್ ವರದಿ
ಮಾತಿನ ಕಲೆ ಪ್ರತಿಯೊಬ್ಬರ ವ್ಯಕ್ತಿತ್ವಕ್ಕೆ ಭೂಷಣವಾಗಿದ್ದು ಉತ್ತಮ ಮಾತಿನ ಕಲೆಯನ್ನು ರೂಢಿಸಿಕೊಳ್ಳುವುದು ಎಲ್ಲರಿಗೂ ಅನಿವಾರ್ಯ ಎಂದು ಕಳಸ ಜೆಸಿಐ ಸಂಸ್ಥೆಯ ಅಧ್ಯಕ್ಷ ಚರಣ್ ಭಂಡಾರಿ ಹೇಳಿದರು.
ಕಳಸ ಜೆಸಿಐ ಸಂಸ್ಥೆ ವತಿಯಿಂದ ಮಂಗಳವಾರ ನಡೆಸಿದ ಪರಿಣಾಮಕಾರಿ ಭಾಷಣ ಕಲೆಯ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾಷಣ ಕಲೆಯನ್ನು ಕರಗತ ಮಾಡಿಕೊಂಡಾಗ ಆತನ ಪ್ರತಿಭೆಯನ್ನು ಹೊರ ಹಾಕಲು ಮತ್ತು ಸಮಾಜದಲ್ಲಿ ಗುರುತಿಸಿಕೊಳ್ಳಲು ಸಹಾಕಾರಿಯಾಗುವುದಲ್ಲದೆ, ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ನಾಯಕನಾಗಿ ಬೆಳೆಯಲು ಭಾಷಣ ಕಲೆ ಅತ್ಯವಶ್ಯಕ. ಈ ನಿಟ್ಟಿನಲ್ಲಿ ಜೆಸಿಐ ಸಂಸ್ಥೆಯಿಂದ ಪರಿಣಾಮಕಾರಿ ಭಾಷಣ ತರಬೇತಿ ಸೇರಿದಂತೆ ತನ್ನ ವ್ಯಕ್ತಿತ್ವ ವಿಕಸನಕ್ಕಾಗಿ ಹಲವಾರು ತರಬೇತಿಗಳನ್ನು ನಡೆಸಲಾಗುತ್ತಿದೆ ಇದರ ಸದ್ಬಳಕೆಯನ್ನು ಮಾಡಿಕೊಳ್ಳಬೆಕು ಎಂದು ಹೇಳಿದರು.
ರಾಷ್ಟ್ರೀಯ ತರಬೇತುದಾರ ವೇಣುಗೋಪಾಲ ಪುತ್ತೂರು ಇವರು ತರಬೇತಿಯನ್ನು ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಚಿತ್ರ ಉಧ್ಯಮಿ ರವಿ ರೈ, ಜೆಸಿಐ ವಲಯ 14ರ ಉಪಾಧ್ಯಕ್ಷ ಪ್ರಶಾಂತ್ ಹೆಚ್.ಆರ್, ಸ್ಥಾಪಕ ಅಧ್ಯಕ್ಷ ಜಗದೀಶ್ ನಾಯ್ಕ್, ಕಾರ್ಯದರ್ಶಿ ಶ್ರೀಕಾಂತ್, ಸದಸ್ಯರಾದ ಮುರುಳಿ, ಸುಧಾಕರ್, ಮಧು, ಸತೀಶ್, ಮಾರುತೇಶ್ ಇತರರು ಇದ್ದರು.