ಕಳಸ ಲೈವ್ ವರದಿ
ಕಳಸದಲ್ಲಿ ಮಾ 24 ಕ್ಕೆ ನಡೆಯುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಲಯ ಮಟ್ಟದ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮಕ್ಕೆ ಕ್ಕೆ ಗುರುವಾರ ಒಕ್ಕೂಟಗಳ ಸದಸ್ಯರಿಂದ ಹೊರೆಕಾಣಿಕೆ ಮೆರವಣಿಗೆ ಮತ್ತು ಸಮರ್ಪಣೆ ನಡೆಯಿತು.
ಬಸ್ರಿಕಲ್, ಕಳಸ, ಕಾರಗದ್ದೆ, ಹೇರಡಿಗೆ, ನೆಲ್ಲಿಬೀಡು, ಜಾಂಬ್ಲೆ, ಸಂಸೆ, ಎಸ್.ಕೆ. ಮೇಗಲ್, ಹೆಬ್ಬಾಳೆ, ಕೋಟೆಹೊಳೆ, ಹೊರನಾಡು, ಕಳಸ ಮತ್ತು ಕಳಸ ವಲಯದ ಎಲ್ಲಾ ಒಕ್ಕೂಟಗಳಿಂದಲೂ ಹೊರೆಕಾಣಿಗೆ ಸಮರ್ಪಣೆ ಮಾಡಲಾಯಿತು.
ಕಳಸ ದೇವಸ್ಥಾನದ ಬಳಿಯಿಂದ ಹೊರೆ ಕಾಣಿಕೆಯ ಮೆರವಣಿಗೆಯು ಕಳಸ ಕೆಪಿಎಸ್ ಶಾಲಾ ಆವರಣದ ವರೆಗೆ ನಡೆಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಮೇಲ್ವಿಚಾರಕ ಶಿವರಾಜ್, ಒಕ್ಕೂಟದ ಅಧ್ಯಕ್ಷೆ ಸುಜಯ ಸದಾನಂದ, ಶೌರ್ಯ ವಿಪತ್ತು ತಂಡದ ಮಾಸ್ಟರ್ ಬಿ.ಕೆ ಮಹೇಶ್,ಸಂಯೋಜಕ ಅಶೋಕ್ ಪೂಜಾರಿ, ಕಳಸ ವಲಯ ಒಕ್ಕೂಟಗಳ ಅಧ್ಯಕ್ಷರುಗಳು, ಸದಸ್ಯರುಗಳು, ಶೌರ್ಯ ತಂಡದ ಸದಸ್ಯರುಗಳು ಇದ್ದರು.
ತಳಿರು ತೋರಣಗಳಿಂದ ಶೃಂಗಾರಗೊಂಡ ಕಳಸ
ಕಳಸದಲ್ಲಿ ಶುಕ್ರವಾರ ನಡೆಯುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಲಯ ಮಟ್ಟದ ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮಕ್ಕೆ ಕಳಸ ಪಟ್ಟಣ ನವ ವಧುವಿನಂತೆ ಕಂಗೊಳಿಸುತ್ತಿದೆ.ರಸ್ತೆಯುದ್ದಕ್ಕೂ ತಳಿರು ತೋರಣ, ಬ್ಯಾನರ್ ಬಂಟಿಂಕ್ಸ್ ಅಳವಡಿಸಲಾಗಿದೆ.ಧರ್ಮಸ್ಥಳ ಧರ್ಮಾಧಿಕಾರಿಗಳಿಗೆ ಸ್ವಾಗತ ಕೋರುವ ಕುದುರೆಮುಖದಿಂದ ಕಳಸದವರೆಗೆ ದಾರಿಯುದ್ದಕ್ಕೂ ದ್ವಾರಗಳನ್ನು ನಿರ್ಮಾಣ ಮಾಡಲಾಗಿದೆ.ಅಲ್ಲದೆ 20 ಕಿ.ಮೀ ದೂರದಿಂದಲೇ ರಸ್ತೆಯುದ್ದಕ್ಕೂ ಬ್ಯಾನರ್ ಹಾಕಿ ಸ್ವಾಗತ ಕೋರಲಾಗಿದೆ.ಕಳಸ ಕೆಪಿಎಸ್ ಶಾಲಾ ಆವರಣದಲ್ಲಿ ಬೃಹತ್ ಗಾತ್ರ ಪೆಂಡಾಲ್ ನಿರ್ಮಾಣ ಮಾಡಲಾಗಿದ್ದು, ಕಳಸ ಮತ್ತು ಮೂಡಿಗೆರೆಯಿಂದ ಸುಮಾರು ಆರು ಸಾವಿರ ಜನರು ಬರುವ ನಿರೀಕ್ಷೆ ಮಾಡಲಾಗಿದೆ.