ಕಳಸ ಲೈವ್ ವರದಿ
ಎಸ್.ಆರ್.ಎಸ್.ಎಂ.ಎನ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾರ್ಕೂರು ಇಲ್ಲಿ ಎಂ.ಕಾಂ ವ್ಯಾಸಂಗ ಮಾಡಿದ ಕು. ಮೇಘಶ್ರಿ ವಿ ರವರು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ 9ನೇ ರಾಂಕ್ ಪಡೆದುಕೊಂಡಿರುತ್ತಾರೆ.
ಹೊರನಾಡಿನ ವಿಜಯ ಕುಮಾರ್ ಮತ್ತು ಪದ್ಮಾಕ್ಷಿ ದಂಪತಿಗಳ ಜೇಷ್ಠ ಪುತ್ರಿಯಾದ ಇವರು ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡಿದ್ದರು.
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆಲ್ಲದರಲ್ಲೂ ಪ್ರತಿಭಾವಂತ ವಿದ್ಯಾರ್ಥಿನಿಯಾದ ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಂಕ್ ಗಳಿಸಿರುವುದು ಕಳಸ ಜನತೆ ಹೆಮ್ಮೆ ಪಡುವ ವಿಚಾರವಾಗಿದೆ.
ಪ್ರಸ್ತುತ ಇವರು ಕಳಸದ ಶೀತಲ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.