ಕಳಸಲೈವ್ ವರದಿ
ಚಿತ್ರ: ಸುಧಾಕರ್ ಸುಧಾಸ್ ಕೆಫೆ
ದಕ್ಷಿಣಕಾಶಿ ಕಳಸ ಕಲಶೇಶ್ವರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷವಾಗಿ ಪೂಜಾ ವಿಧಿ ವಿಧಾನಗಳು ಶನಿವಾರ ನೆರವೇರಿದವು.
ಶಿವರಾತ್ರಿಯ ಮುಂಜಾನೆ ಭಕ್ತಾಧಿಗಳು ಪಂಚ ತೀರ್ಥಗಳಾದ ವಶಿಷ್ಠತೀರ್ಥ,ರುದ್ರತೀರ್ಥ,ಅಂಬಾತೀರ್ಥ,ಕೋಟಿತೀರ್ಥ,ನಾಗತೀರ್ಥಗಳಲ್ಲಿ ಸ್ನಾನ ಮಾಡಿ ಭಕ್ತರು ದೇವಸ್ಥಾನಕ್ಕೆ ತೆರಳಿದರು.
ದೇವಾಲಯದಲ್ಲಿ ದಿನವಿಡಿ ಪೂಜೆ, ರುದ್ರಪಠಣ, ಶಿವಸ್ತುತಿ ನಡೆಯಿತು.
ಹೊಬಳಿಯ ನೂರಾರು ಭಕ್ತರು ದೇವಸ್ಥಾನದಲ್ಲಿ ತೀರ್ಥಸ್ನಾನ ಮಾಡಿ ಬಿಲ್ವಪತ್ರೆ ಅರ್ಪಿಸಿ,ಕಷ್ಟ ಕಾಲಕ್ಕೆ ಹೇಳಿದ ಹರಕೆ ತೀರಿಸಿಕೊಂಡರು.
ಇಲ್ಲಿಯ ಕುದುರೆಮುಖದ ವೇದವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಶಿವರಾತ್ರಿಯನ್ನು ಆಚರಿಸಲಾಯಿತು.
ದೇವರಿಗೆ ಶಾಲ್ಯನ್ನ ಅಲಂಕಾರ ಸೇವೆ,ಹೂವಿನ ಪೂಜೆ,ಮಹಾನ್ಯಾಸಪೂರ್ವಕ ಏಕಾದಶ ರುದ್ರಾಭಿಷೇಕ,ಏಕವಾರ ರುದ್ರಾಭಿಷೇಕ,ಪಂಚಾಮೃತ ಅಭಿಷೇಕ, ರುದ್ರತ್ರಿಷತಿ ಪೂಜೆಗಳು ನಡೆಯಿತು..