ಕಳಸ ಲೈವ್ ವರದಿ
ಕಳಸ ತಾಲ್ಲೂಕು ಉತ್ಸವ 2023ರ ಲಾಂಛನವನ್ನು ಗುರುವಾರ ಶಾಸಕ ಎಂ.ಪಿ.ಕುಮಾರಸ್ವಾಮಿ ಬಿಡುಗಡೆ ಮಾಡುವುದರೊಂದಿಗೆ ಪೆ 7 ರಂದು ನಡೆಯುವ ಉತ್ಸವ ಚಟುವಟಿಕೆಗಳು ವೇಗ ಪಡೆದುಕೊಂಡವು.
ಈ ವರ್ಷದ ತಾಲ್ಲೂಕು ಉತ್ಸವ ವೈಶಿಷ್ಟಪೂರ್ಣ ಕಾರ್ಯಕ್ರಮಗಳ ಮೂಲಕ ಪೆ 7 ರಂದು ಕಳಸ ತಾಲ್ಲೂಕು ಕೇಂದ್ರದಲ್ಲಿ ಕಳಸ ಉತ್ಸವ ನಡೆಯಲಿದೆ.
ಬೆಳಿಗ್ಗೆ 10.30ಗೆ ಕಳಸ ಕಲಶೇಶ್ವರ ದೇವಸ್ಥಾನದ ಬಳಿಯಿಂದ ವಿವಿಧ ವೈವಿಧ್ಯಮಯ ಸ್ತಬ್ಧ ಚಿತ್ರಗಳು ಕಲಾ ತಂಡಗಳು, ವಾಧ್ಯ ಗೋಷ್ಠಿಗಳೊಂದಿಗೆ ಅದ್ದೂರಿಯ ಉತ್ಸವ ಮೆರವಣಿಗೆ ನಡೆಯಲಿದೆ.
ಮಧ್ಯಾಹ್ನ 2 ಗಂಟೆಯಿಂದ ಕೆಪಿಎಸ್ ಪ್ರೌಢ ಶಾಲಾ ಆವರಣದ ಬೃಹತ್ ವೇದಿಕೆಯಲ್ಲಿ ಸ್ಥಳಿಯರಿಂದ ಸಾಂಸ್ಕøತಿಕ ಕಾರ್ಯಕ್ರಮ, 6 ಗಂಟೆಗೆ ಸಭಾ ಕಾರ್ಯಕ್ರಮ, ನಂತರ ಉತ್ಸವದ ವಿಶೇಷ ಆಕರ್ಷಣೆ ಮಂಗಳೂರು ಪ್ರಖ್ಯಾತ ಕಲಾ ತಂಡ ಹೆಜ್ಜೆ ನಾದ ಇವರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಳಸ ತಹಶೀಲ್ದಾರ್ ನಂದಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ, ಮುಖಂಡರಾದ ಎಂ.ಎ.ಶೇಷಗಿರಿ, ಕೆ.ಸಿ.ಧರಣೇಂದ್ರ, ಸಂತೋಷ್ ಹಿನಾರಿ, ಅ.ರಾ.ಸತೀಶ್ಚಂದ್ರ, ಮಮ್ತಾಜ್ ಬೇಗಂ, ಆಶಾಲತಾ ಡಿ ಜೈನ್, ವೃಷಭರಾಜ್, ಗಿರೀಶ್ ಹೆಮ್ಮಕ್ಕಿ, ಪಾಂಡುರಂಗ, ಉಪತಹಶೀಲ್ದಾರ್ ಹೇಮಂತ್ ಕುಮಾರ್ ಇದ್ದರು.