ಕಳಸ ಲೈವ್ ವರದಿ
ಇಲ್ಲಿಯ ಶ್ರೀ ಕಲಶೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಶನಿವಾರ ದ್ವಜಾರೋಹಣ ಕಾರ್ಯಕ್ರಮವು ನಡೆಯಿತು.
ಶುಕ್ರವಾರ ಗಣಪತಿ ಪೂಜೆ ಅಂಕುರಾರ್ಪಣದೊಂದಿಗೆ ಪ್ರಾರಂಭಗೊಂಡ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ದ್ವಜಾರೋಹಣವನ್ನು ನಡೆಸಲಾಯಿತು. ದ್ವಜಾರೋಹನದ ಮುಂಚಿತವಾಗಿ ಶ್ರೀ ದೇವರಲ್ಲಿ ವಿಶೇಷ ಪ್ರಾರ್ಥನೆ ನಂತರ ಹೋಮಗಳು ನಡೆದ ಬಳಿಕ ದೇವಸ್ಥಾನದ ಮುಂಬಾಗದಲ್ಲಿರುವ ದ್ವಜ ಸ್ಥಂಬಕ್ಕೆ ಧಾರ್ಮಿಕ ಸಂಪ್ರದಾಯಂತೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.ನಂತರ ಮಹಾಪೂಜೆಯು ನೆರವೇರಿತು. ಒಂಬತ್ತು ದಿನಗಳ ಕಾಲ ಇಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಪೆ 2 ರಂದು ರಥೋತ್ಸವ ನಡೆಯಲಿದೆ.