ಕಳಸ ಲೈವ್ ವರದಿ
ಕಳಸ ಪಶುವೈದ್ಯ ಇಲಾಖೆ ಮತ್ತು ಕರ್ನಾಟಕ ರಾಜ್ಯ ಕುಕ್ಕುಟ ಮಹಾ ಮಂಡಳಿ ಸಹಯೋಗದಲ್ಲಿ ಕಳಸ ತಾಲ್ಲೂಕಿನ ಆರು ಗ್ರಾಮಪಂಚಾಯಿತಿಯ ಅರ್ಹ ಮಹಿಳಾ ಫಲಾನುಭವಿಗಳಿಗೆ ಶುಕ್ರವಾರ ಕೋಳಿ ಮರಿಗಳನ್ನು ವಿತರಿಸಲಾಯಿತು.
ಕರ್ನಾಟಕ ಸಹಕಾರ ಮಹಾ ಮಂಡಳಿ ವತಿಯಿಂದ ತಾಲ್ಲೂಕಿನ 108 ಫಲಾನುಭವಿಗಳಿಗೆ ತಲಾ 20 ಮರಿಗಳಂತೆ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕುಕ್ಕುಟ ಮಹಾ ಮಂಡಲಿಯ ಸಹಾಯಕ ನಿರ್ದೇಶಕ ಡಾ. ಆನಂದ್ ಕುಮಾರ್ ಮಾತನಾಡಿ ಬಿಪಿಎಲ್ ಕಾರ್ಡು ಹೊಂದಿದ ಮಹಿಳೆಯರಿಗೆ ಮಾತ್ರ ಕೋಳಿ ಮರಿ ವಿತರಣೆ ಮಾಡಲಾಗುತ್ತದೆ.ಈ ಬಗ್ಗೆ ಕೆಲ ತಿಂಗಳ ಹಿಂದೆ ಆಯಾಯ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿ ಅಲ್ಲಿಂದ ಬಂದಿರುವ ಫಲಾನುಭವಿಗಳ ಪಟ್ಟಿಯಂತೆ ಒಂದು ತಾಲ್ಲೂಕಿನ 108 ಜನ ಫಲಾನುಭವಿಗಳನ್ನು ಆಯ್ಕೆ ಮಾಡಿ ಕೋಳಿ ಮರಿ ವಿತರಣೆ ಮಡಲಾಗುತ್ತದೆ.ಮುಂದಿನ ವರ್ಷದಿಂದ ಪ್ರತೀ ತಾಲ್ಲೂಕಿನಲ್ಲಿ 200 ಜನರನ್ನು ಆಯ್ಕೆ ಮಾಡಲಾಗುತ್ತದೆ. ಕುಕ್ಕುಟೋಧ್ಯಮ್ಮಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿ ಮಹಿಳೆಯರನ್ನು ಆರ್ಥಿಕವಾಗಿ ಸದೃಡರನ್ನಾಗಿ ಮಾಡಲು ಸರ್ಕಾರ ಈ ಯೋಜನೆ ಮಾಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯಸದಾನಂದ, ಪಶು ವೈದ್ಯ ಪರೀಕ್ಷಕರಾದ ಜಯಣ್ಣ, ನಾಗೇಂದ್ರ, ಪ್ರಭಾವತಿ ಇದ್ದರು.