ಕಳಸ ಲೈವ್ ವರದಿ
ಕಳಸ ಮೇಲಂಗಡಿ ಮನೆಯೊಂದಕ್ಕೆ ಹಾಡ ಹಗಲೆ ಮನೆಗೆ ಕಳ್ಳರು ನುಗ್ಗಿ ಲಕ್ಷಾಂತರ ಮೌಲ್ಯದ ನಗ-ನಗದು ದೋಚಿದ ಘಟನೆ ಭಾನುವಾರ ನಡೆದಿದೆ.
ಹೊರನಾಡು ರಸ್ತೆಯ ಮೇಲಂಗಡಿ ರಾಜಶೇಖರ್ ಎಂಬುವವರ ಮನೆಗೆ ಭಾನುವಾರ ಮಧ್ಯಾಹ್ನದ ಸಮಯಕ್ಕೆ ಯಾರೂ ಇಲ್ಲದ ಸಂದರ್ಭದಲ್ಲಿ ಕಳ್ಳರು ನುಗ್ಗಿ 38 ಗ್ರಾಂ ತೂಕದ ಚಿನ್ನದ ತಾಳಿ ಸರ, 12 ಗ್ರಾಂ ತೂಕದ ಚಿನ್ನದ ಓಲೆ, ಬೆಳ್ಳಿಯ ಎರಡು ಜೊತೆ ಕಾಲು ಚೈನ್, ಮಗುವಿನ ಕೈ ಕಡಗ ಸೇರಿದಂತೆ 10 ಸಾವಿರ ನಗದನ್ನು ಕಳ್ಳರು ದೋಚಿದ್ದಾರೆ ಇದರ ಒಟ್ಟು ಮೌಲ್ಯ 2,40,000 ಎಂದು ಅಂದಾಜಿಸಲಾಗಿದೆ.ಮನೆಗೆ ಬೀಗ ಹಾಕಿ ಹೋಗಿದ್ದು ಮಧ್ಯಾಹ್ನ 3.45 ಸಮಯಕ್ಕೆ ರಾಜಶೇಖರ್ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸ್ಥಳಕ್ಕೆ ಕಳಸ ಪೊಲೀಸರು ಬೆರಳಚ್ಚು ತಜ್ಞರು, ಶ್ವಾನ ದಳ ಆಗಮಿಸಿ ಪರಿಶೀಲಿಸಿದ್ದಾರೆ.