ಕಳಸ ಲೈವ್ ವರದಿ
ಕಳಸ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸನ್ನಿಧಾನದಲ್ಲಿ 44 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಜನವರಿ ಒಂದರಂದು ನಡೆಯಲಿದೆ.
ಅಂದು ಬೆಳಿಗ್ಗೆ 11 ಗಂಟೆಗೆ ಗಣಹೋಮ, ಮಧ್ಯಾಹ್ನ 12.30 ರಿಂದ ಮಹಾಮಂಗಳಾರತಿ, ಪ್ರಸಾದ ವಿನಿಯೋಗ. ಮಧ್ಯಾಹ್ನ 1ರಿಂದ 3 ಗಂಟೆವರೆಗೆ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ 5 ಗಂಟೆಗೆ ಪ್ರಸಿದ್ಧ ಕೇರಳದ ಕಲಾವಿದರಿಂದ ಪಂಚವಾದ್ಯ ಚೆಂಡೆಮೇಳದೊಂದಿಗೆ ಶ್ರೀ ಸ್ವಾಮಿಯ ವೈಭವಯುತ ಪಾಲುಕೊಂಬು ಮೆರವಣಿಗೆಯು ಶ್ರೀ ಕಲಶೇಶ್ವರ ಸ್ವಾಮಿ ಕ್ಷೇತ್ರದಿಂದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಸಾಗಿ ಮಹಾವೀರ ರಸ್ತೆಯಲ್ಲಿ ಹಿಂದಿರುಗುವುದು.
ನಂತರ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಮತ್ತು ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ.
ಅನ್ನದಾನದ ಸೇವೆಗಾಗಿ ಅಕ್ಕಿ, ಬೇಳೆ, ತರಕಾರಿ ಮತ್ತು ದೀಪಕ್ಕೆ ಎಣ್ಣೆಯನ್ನು ಕೊಡಲು ಇಚ್ಚಿಸುವವರು ಭಕ್ತಾಧಿಗಳು ದೀಪೋತ್ಸವಕ್ಕೆ 2 ದಿನ ಮುಂಚಿತವಾಗಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಒಪ್ಪಿಸಬಹುದು ಎಂದು ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ತಿಳಿಸಿದೆ.