ಕಳಸ ಲೈವ್ ವರದಿ
ಕಳಸ ಜೆ.ಇ.ಎಮ್ ಶಾಲೆಯ ವಿದ್ಯಾರ್ಥಿಗಳು ದಿನಾಂಕ 21/12/2022ರಿಂದ 27/12/2022ರವರೆಗೆ ಮೂಡುಬಿದಿರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಸ್ಕೌಟ್ ಗೈಡ್ ಸಾಂಸ್ಕøತಿಕ ಜಾಂಬೂರಿಯಲ್ಲಿ ಸುಮಾರು 40 ವಿದ್ಯಾರ್ಥಿಗಳು ಪಾಲ್ಗೊಂಡಿರುತ್ತಾರೆ.
ಇದು ಭಾರತದ ಇತಿಹಾಸದಲ್ಲಿಯೇ ಮೊದಲ ಭಾರಿಗೆ ನಡೆಯುತ್ತಿರುವ ಕಾರ್ಯಕ್ರಮವಾಗಿದ್ದು ವಿವಿಧ ದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಆಗಮಿಸಿದ್ದು ಅಂದಾಜಿನ ಪ್ರಕಾರ 50ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ದೇಶ ವಿದೇಶಗಳ ಸಂಸ್ಕೃತಿಯನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ಹಾಗೂ ಏಕ್ ಭಾರತ್ ಶ್ರೇಷ್ಠ ಭಾರತ್ ಯೋಜನೆಯಡಿಯಲ್ಲಿ ದೇಶಾಭಿಮಾನ ಹುಟ್ಟಿಸುವಂತಹ ಗುಂಪು ನೃತ್ಯವನ್ನು ಕಳಸ ಜೆ.ಇ.ಎಮ್ ಶಾಲೆಯ 40 ವಿದ್ಯಾರ್ಥಿಗಳು ದೊಡ್ಡ ವೇದಿಕೆಯನ್ನು ಬಳಸಿಕೊಂಡರು.