ಕಳಸ ಲೈವ್ ವರದಿ
ಪ್ರಭು ಯೇಸುಕ್ರಿಸ್ತ ಜನ್ಮ ತಾಳಿದ ದಿನದ ಆಚರಣೆಗೆ ಕ್ರೈಸ್ತ ಬಾಂದವರು ಪೂರ್ವ ತಯಾರಿ ಮಾಡಿಕೊಂಡಿದ್ದು,ತಾಲೂಕಿನ ಹಿರೇಬೈಲಿನ ಸಂತ ಜೋಸೆಫರ ಚರ್ಚ್ ಆವರಣದಲ್ಲಿ ಕ್ರಿಸ್ಮಸ್ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ.
ಕ್ರಿಸ್ಮಸ್ ಪ್ರಯುಕ್ತ ಆಕರ್ಷಕ ಗೋದಲಿಯನ್ನು ಚರ್ಚ್ ಆವರಣದಲ್ಲಿ ರಚನೆ ಮಾಡಲಾಗಿದೆ. ಆಕರ್ಷಕ ವಿದ್ಯುತ್ ದೀಪಗಳನ್ನು ಅಳವಡಿಸಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಹಬ್ಬದ ವಿಶೇಷ ಪ್ರಾರ್ಥನೆಗೆ ಚರ್ಚ್ನಲ್ಲಿ ವಿಶೇಷ ತಯಾರಿಯನ್ನು ಮಾಡಲಾಗಿದೆ.
ಚರ್ಚ್ ಧರ್ಮಗುರು ಫಾದರ್ ಡೇವಿಡ್ ಕ್ರಿಸ್ಮಸ್ ಸಂದೇಶ ಕಳಿಸಿದ್ದು ಎಲ್ಲರ ಕುಟುಂಬಗಳನ್ನು ಏಸುದೇವ ಹರಸಲಿ, ಎಲ್ಲರ ಕಲ್ಯಾಣಕ್ಕೆ ಶುಭ ಹಾರೈಕೆ ಎಂದಿದ್ದಾರೆ.