ಕಳಸ ಲೈವ್ ವರದಿ
ಕ್ರಿಸ್ಮಸ್ ಹಬ್ಬ, ವಾರದ ರಜೆಯ ಹಿನ್ನಲೆಯಲ್ಲಿ ಕಳಸಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಕಳಸ ಪಟ್ಟಣದಲ್ಲಿ ವಾಹನ ದಟ್ಟನೆ ಕಂಡು ಬಂತು.
ಇಲ್ಲಿಯ ಧಾರ್ಮಿಕ ಕ್ಷೇತ್ರವಾದ ಕಲಶೇಶ್ವರ ದೇವಸ್ಥಾನ, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ.ಅಲ್ಲದೆ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸದ ಹಿನ್ನಲೆಯಲ್ಲಿ ದಿನಕ್ಕೆ ಸಾವಿರಾರು ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ.
ಇದರಿಂದ ಶನಿವಾರ ಕಳಸ ಪಟ್ಟಣದಲ್ಲಿ ಆಗಾಗ ಟ್ರಾಫಿಕ್ ಜಾಮ್ ಉಂಟಾಯಿತು. ಕಲಶೇಶ್ವರ ದೇವಸ್ಥಾನದ ಬಳಿ ಪ್ರಯಾಣಿಕರು ಪರದಾಡುವಂತಾಯಿತು. ಹೊಂಡ ಗುಂಡಿಗಳಿಂದ ಕೂಡಿದ ರಸ್ಥೆಯಿಂದಾಗಿ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ.ಹೊರನಾಡು ರಸ್ಥೆಯುದ್ದಕ್ಕೂ ಟ್ರಾಫಿಕ್ ಜಾಮ್ಗಳು ಉಂಟಾಯಿತು.
ಇತ್ತ ಹೆಬ್ಬಾಳೆಯ ಅಪಾಯಕಾರಿ ಸ್ಥಳದಲ್ಲಿ ಶಾಲಾ ಮಕ್ಕಳು ನೀರಿಗಿಳಿದು ಸ್ನಾನ ಮಾಡುತ್ತಿರುವುದು ಕಂಡು ಬಂತು. ಸ್ವತಃ ಶಿಕ್ಷಕರೆ ಮಕ್ಕಳನ್ನು ನೀರಿಗಿಳಿಸಿ ಮಕ್ಕಳೊಂದಿಗೆ ಶಿಕ್ಷಕರೂ ಕೂಡ ಸ್ನಾನ ಮಾಡುತ್ತಿರುವುದು ಕಂಡು ಬಂತು.