ಕಳಸ ಲೈವ್ ವರದಿ
ಕಳೆದೆರಡು ತಿಂಗಳುಗಳಿಂದ ಕಳಸ ಭಾಗದಲ್ಲಿ ಸಂಚಾರ ಮಾಡುತ್ತಿರುವ ಎರಡು ಕಾಡಾನೆಗಳು ಹಳುವಳ್ಳಿಯ ತೋಟಮಕ್ಕಿಯಲ್ಲಿ ಮಂಗಳವಾರ ರಾತ್ರಿ ಕಂಡು ಬಂದಿವೆ.
ಕಳೆದ ಮೂರ್ನಾಲ್ಕು ದಿನ ಜನರ ಕಣ್ಣಿಗೆ ಕಾಣಿಸಿಕೊಳ್ಳದ ಕಾಡಾನೆಗಳು ಎರಡು ದಿನಗಳಿಂದ ಹಳುವಳ್ಳಿ ಪ್ರದೇಶದಲ್ಲಿ ಕಂಡು ಬಂದಿವೆ.ಇಲ್ಲಿಯ ತೋಟಮಕ್ಕಿಯಲ್ಲಿ ಬೆಳೆದು ನಿಂತಿದ್ದ ಭತ್ತದ ಗದ್ದೆಯಲ್ಲಿ ಸಂಚರಿಸಿ ಭತ್ತ ಕೃಷಿಯನ್ನು ನಾಶ ಪಡಿಸಿವೆ. ಕಳೆದ ಎರಡು ದಿನಗಳಿಂದ ಇದೇ ಪ್ರದೇಶದಲ್ಲಿದ್ದು, ಭತ್ತ, ಅಡಕೆ, ಬಾಳೆ ಮುಂತಾದ ಕೃಷಿಯನ್ನು ಹಾನಿ ಮಾಡಿವೆ.
ಎರಡು ತಿಂಗಳಿನಿಂದ ಹಳುವಳ್ಳಿ, ಮಾವಿನಕೆರೆ, ಮಾಗಲು, ಗಣಪತಿಕಟ್ಟೆ, ಅಬ್ಬುಗುಡಿಗೆ, ಎಸ್.ಕೆ.ಮೇಗಲ್, ನೆಲ್ಲಿಬೀಡು, ಜಾಂಬ್ಲೆ, ಕುದುರೆಮುಖ ಮುಂತಾದ ಪ್ರದೇಶಗಳಿಗೆ ತೆರಳಿ ಅಲ್ಲಿ ಸಾಕಷ್ಟು ಪ್ರಮಾಣದ ಕೃಷಿಗಳನ್ನು ಹಾನಿ ಮಾಡಿವೆ.