ಕಳಸ ಲೈವ್ ವರದಿ
ಕಳಸ-ಬೆಳ್ತಂಗಡಿ ತಾಲ್ಲೂಕು ಗಡಿ ಭಾಗವಾದ ಬಂಗರಬಲಿಗೆ ಗ್ರಾಮದಲ್ಲಿ ಟ್ಯ್ರಾಕ್ಟರ್ ಪಲ್ಟಿಯಾಗಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.
ಅಲ್ಲಿನ ರಸ್ತೆ ಕಾಮಗಾರಿಗಾಗಿ ಸಲಕರಣೆಗಳನ್ನು ಟ್ರ್ಯಾಕ್ಟರ್ನವಲ್ಲಿ ಸಾಗಿಸುತ್ತಿದ್ದಾಗ ಟ್ರ್ಯಾಕ್ಟರ್ ಇಳಿಜಾರಿನಲ್ಲಿ ಪಲ್ಟಿಯಾಗಿದೆ.
ಟ್ರಾಕ್ಟರ್ ಕೆಳಗೆ ಸಿಲುಕಿ ಬೇಲೂರು ಮೂಲದ ಕಾರ್ಮಿಕ ಲೋಕೇಶ್(32) ತೀವ್ರವಾಗಿ ಗಾಯಗೊಂಡಿದ್ದರು.ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರುವಾಗ ಮಾರ್ಗ ಮಧ್ಯದಲ್ಲಿ ಅವರು ಮೃತಪಟ್ಟಿದ್ದಾರೆ