ಕಳಸ ಲೈವ್ ವರದಿ
ತೆಂಗಿನ ಮರ ವಿದ್ಯುತ್ ಲೈನ್ ಮೇಲೆ ಬಿದ್ದು ಸಂಸೆ-ಕುದುರೆಮುಖ ರಸ್ತೆ ಸಂಚಾರ ಕೆಲಕಾಲ ಸ್ಥಗಿತಗೊಂಡಿತು.
ಸಂಸೆಯ ಬಾಳ್ಗಲ್ ಸಮೀಪ ತೆಂಗಿನ ಮರವನ್ನು ಕಡಿಯುವ ಸಂದರ್ಭದಲ್ಲಿ ಅದು ಆಯತಪ್ಪಿ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ರಸ್ತೆ ಬದಿಯಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನ್ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಈ ಸಂದರ್ಭದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ.
ಇದರಿಂದ ಕೆಲ ಕಾಲ ರಸ್ತೆ ಸಂಚಾರ ಸ್ಥಗಿತ ಗೊಂಡಿತ್ತು. ಪರಿಣಾಮ ಕುದುರೆಮುಖ, ಕಾರ್ಕಳ, ಮಂಗಳೂರು ಕಡೆ ಹೋಗುವವರು ತೊಂದರೆ ಅನುಭವಿಸಿದರು.