ಕಳಸ ಲೈವ್ ವರದಿ
ಕಳಸದ ಮರಸಣಿಗೆ ಗ್ರಾಮದ ತೋಟವೊಂದರ ಲೈನ್ ನಲ್ಲಿ ವಾಸ ಮಾಡುತ್ತಿದ್ದ ವ್ಯಕ್ತಿಗಳಿಬ್ಬರ ಮಧ್ಯೆ ಜಗಳದಲ್ಲಿ ಮೂಗನ್ನೆ ಕತ್ತರಿಸಿದ ಘಟನೆ ಭಾನುವಾರ ನಡೆದಿದೆ.
ಮರಸಣಿಗೆಯ ಜೋಯಿ ಮತ್ತು ಥೋಮಸ್ ಎಂಬುವವರ ಮಧ್ಯೆ ಯಾವುದೋ ವಿಚಾರಕ್ಕಾಗಿ ಗಲಾಟೆಯಾಗುತ್ತಿತ್ತು.
ಗಲಾಟೆ ತಾರಕಕ್ಕೇರಿ ಜೋಯಿ, ಥೋಮಸ್ ಅವರ ಮೂಗಿಗೆ ಕತ್ತಿಯಿಂದ ಹಲ್ಲೆ ಮಾಡಿ ಮೂಗನ್ನು ಕತ್ತರಿಸಿದ್ದಾರೆ ಎಂದು ಥೋಮಸ್ ಪತ್ನಿ ಕಳಸ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಲ್ಲೆಯಾದ ವ್ಯಕ್ತಿಯನ್ನು ಕಳಸ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಕಳಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.