ಕಳಸ ಲೈವ್ ವರದಿ
ಅವಿನ್ ಸ್ವರ ಸಂಗಮದ ದ್ವಿಶತಕ ಸಂಚಿಕೆಯ ಸಂಭ್ರಮದ ಪ್ರಯುಕ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಹಾಡು ಹಬ್ಬ ಕಾರ್ಯಕ್ರಮ ನಡೆಯಿತು.
ಶುಕ್ರವಾರ ನಡೆದ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಆ.ರಾ.ರಾಧಕೃಷ್ಣ ಉದ್ಘಾಟಿಸಿದರು. ಅಲ್ಲದೆ ಇದೇ ಸಂದರ್ಭದಲ್ಲಿ ಕುದುರೆಮುಖ ವೃತ್ತ ನಿರೀಕ್ಷಕ ರಮೇಶ್ ಕುಮಾರ್ ಹಾಡೋಂದನ್ನು ಹೇಳಿ ರಂಜಿಸಿದರು.ಈ ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಸತೀಶ್ಚಂದ್ರ, ಅವಿನ್ ಸ್ವರ ಸಂಗಮದ ಮುಖ್ಯಸ್ಥ ಮಗ್ಗಲಮಕ್ಕಿ ಗಣೇಶ್, ಕವಿ ಪ್ರೇಂ ಕುಮಾರ್ ಇದ್ದರು.
ಶನಿವಾರ ಇದೇ ವೇದಿಕೆಯಲ್ಲಿ ಹಾಡು ಹಬ್ಬ ಕಾರ್ಯಕ್ರಮ ಕಾರ್ಯಕ್ರಮ ನಡೆಯಿತು. ಸ್ಥಳೀಯ ಹಲವಾರು ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಹಾಡು ಹಾಡಲು ಅವಕಾಶ ಮಾಡಿಕೊಡಲಾಯಿತು.ಈ ಕಾರ್ಯಕ್ರಮ ಭಾನುವಾರವೂ ನಡೆಯಲಿದೆ.
ಕಾರ್ಯಕ್ರಮವನ್ನು ಗೋಪಾಲಾಚಾರ್ ಉದ್ಘಾಟಿಸಿದರು.ಮಗ್ಗಲಮಕ್ಕಿ ಗಣೇಶ್ ಅಧ್ಯಕ್ಷತೆ ವಹಿಸಿದ್ದರು.ದರ್ಪಣ ಸಂಪಾದಕ ಪ್ರಸನ್ನ ಗೌಡಹಳ್ಳಿ,ಬಿ.ಕೆ.ಮಂಜುನಾಥ್, ವಸಂತ್ ಹರ್ಗೋಡ್, ಕಣಚೂರು ಆನಂದ್, ಪ್ರೇಮ್ ಕುಮಾರ್, ಬಕ್ಕಿ ಮಂಜುನಾಥ್, ಸಿದ್ದಿಕ್, ಜ್ಯೋತಿ ಜೈನ್ ಮತ್ತಿತರರು ಇದ್ದರು.