ಕಳಸ ಲೈವ್ ವರದಿ
ಪರಿಸರ ಮತ್ತು ಮನುಷ್ಯ ಸಂಬಂಧಗಳನ್ನು ತೇಜಸ್ವಿ ಅವರ ಕೃತಿಗಳಲ್ಲಿ ಅದ್ಬುತವಾಗಿ ಮೂಡಿಬಂದಿದೆ ಎಂದು ಲೇಖಕ ಹಾಗೂ ಸಂಶೋಧಕ ಪ್ರದೀಪ್ ಕೆಂಜಿಗೆ ಹೇಳಿದರು.
ಕಳಸ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ತೇಜಸ್ವಿ ಸಾಹಿತ್ಯ ಯಾನ ಕಾರ್ಯಕ್ರಮದಲ್ಲಿ ಚಿದಂಬರ ರಹಸ್ಯ ಕೃತಿ ಬಗ್ಗೆ ಉಪನ್ಯಾಸ ನೀಡಿದ ಅವರು ಸಾಹಿತ್ಯಕ್ಕೆ ಕೆಲವು ಹೊಸ ಆಯಾಮಗಳನ್ನು ತಂದವರು ತೇಜಸ್ವಿ. ಮನುಷ್ಯನ ಪ್ರಜ್ಞೆ ಎಷ್ಟರ ಮಟ್ಟಿಗೆ ಸ್ವಾತಂತ್ರ್ಯ ಎಂಬುವ ವಿಚಾರ ಚಿದಂಬರ ರಹಸ್ಯ ಕೃತಿಯಲ್ಲಿ ಪರೋಕ್ಷವಾಗಿ ಚಿತ್ರಿತವಾಗಿದೆ. ತೇಜಸ್ವಿ ಅವರು ನಗರ ಪ್ರದೇಶದಿಂದ ಹಳ್ಳಿಗೆ ಬಂದು ನೆಲೆಸಿದ ಕಾರಣಕ್ಕಾಗಿ ಇಲ್ಲಿನ ಪರಿಸರ ಅವರ ವಿಶಿಷ್ಠ ಸಾಹಿತ್ಯ ರಚನೆಗೆ ಪ್ರೇರಣೆಯಾಯಿತು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅ.ರಾ.ಸತೀಶ್ಚಂದ್ರ, ತೇಜಸ್ವಿ ಕನ್ನಡ ನವೋದಯ ಸಾಹಿತ್ಯಕ್ಕೆ ಬುನಾದಿ ಹಾಕಿದರು.ಮಲೆನಾಡಿನ ಜನಜೀವನವನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ ಮಾತನಾಡಿ, ತೇಜಸ್ವಿ ಕೃತಿಗಳನ್ನು ವಿದ್ಯಾರ್ಥಿಗಳು ಓದುವ ಅಗತ್ಯವಿದೆ. ಕಾಲೇಜು ಗಳಲ್ಲಿ ತೇಜಸ್ವಿ ಸಾಹಿತ್ಯ ಯಾನ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ತೇಜಸ್ವಿ ಅವರ ಬರಹ ಚಿಂತನೆಗಳನ್ನು ತಲುಪಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಳಸ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಯ ಸದಾನಂದ, ಯುರೇಕಾ ಪ್ರತಿಷ್ಠಾನ ಮುಖ್ಯಸ್ಥ ದೀಪಕ್ ದೊಡ್ಡಯ್ಯ, ಪೋಷಕರ ವೇದಿಕೆ ಅಧ್ಯಕ್ಷ ಅಜಿತ್ ಕುಮಾರ್, ಸಾಹಿತ್ಯ ಪರಿಷತ್ತು ಕಸಬಾ ಅಧ್ಯಕ್ಷ ಶೇಖರ ಶೆಟ್ಟಿ, ಉಪನ್ಯಾಸಕರಾದ ಡಾ|ರಮ್ಯ, ಡಾ|ಅದಿತ್ಯ ಆಡಿಗ, ಸಂದೀಪ್,ತೇಜಸ್ವಿ ಪ್ರತಿμÁ್ಠನದ ನಿರ್ವಾಹಕ ನಂದನ್ ಕುಪ್ಪಳ್ಳಿ, ಕಾರ್ಯಕ್ರಮ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ಇದ್ದರು.