ಕಳಸ ಲೈವ್ ವರದಿ
ಕಳೆದೆರಡು ತಿಂಗಳುಗಳಿಂದ ಕಳಸ ಭಾಗದಲ್ಲಿ ಸಂಚಾರ ಮಾಡುತ್ತಿರುವ ಎರಡು ಕಾಡಾನೆಗಳು ಸಧ್ಯ ಕಳಸ ಬಿಟ್ಟು ಹೋಗುವ ಲಕ್ಷಣ ಕಾಣುತ್ತಿಲ್ಲ.
ಒಂದೆರಡು ದಿನ ಜನರ ಕಣ್ಣಿಗೆ ಕಾಣಿಸಿಕೊಳ್ಳದ ಕಾಡಾನೆಗಳು ಶುಕ್ರವಾರದ ರಾತ್ರಿ ಮುಂಡುಗದ ಮನೆ ಸಮೀಪ ಕಾಡಾನೆಗಳು ಕಾಣಿಸಿಕೊಂಡಿವೆಅಲ್ಲಿಯ ಅರುಣ್ ಎಂಬುವವರ ತೋಟಕ್ಕೆ ನುಗ್ಗಿ ಬಾಳೆ, ಅಡಕೆ ಮರಗಳನ್ನು ತಿಂದು ಪುಡಿ ಮಾಡಿ ಹಾಕಿವೆ.ಶನಿವಾರ ಬೆಳಗ್ಗಿನ ವರೆಗೂ ಅದೇ ಪ್ರದೇಶದಲ್ಲಿ ಕಂಡು ಬಂದಿದ್ದವು.
ಕಳೆದ ಎರಡು ತಿಂಗಳಿನಿಂದ ಹಳುವಳ್ಳಿ, ಮಾವಿನಕೆರೆ, ಮಾಗಲು, ಗಣಪತಿಕಟ್ಟೆ, ಅಬ್ಬುಗುಡಿಗೆ, ಎಸ್.ಕೆ.ಮೇಗಲ್, ನೆಲ್ಲಿಬೀಡು, ಜಾಂಬ್ಲೆ, ಕುದುರೆಮುಖ ಮುಂತಾದ ಪ್ರದೇಶಗಳಿಗೆ ತೆರಳಿ ಅಲ್ಲಿ ಸಾಕಷ್ಟು ಪ್ರಮಾಣದ ಕೃಷಿಗಳನ್ನು ಹಾನಿ ಮಾಡಿವೆ.