ಕಳಸ ಲೈವ್ ವರದಿ
ಕಳಸ ಕಲಶೇಶ್ವರ ಸ್ವಾಮಿ ದೇವರ ಕಾರ್ತಿಕ ಮಾಸ ದೀಪೋತ್ಸವ,ಅಡ್ಡಪಲ್ಲಕಿ ಉತ್ಸವ ಬುಧವಾರ ಅತ್ಯಂತ ವಿಜ್ರಂಬಣೆಯಿಂದ ನೆರವೇರಿತು.
ದೀಪೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು.ದೇವರಿಗೆ ವಿಶೇಷ ಪೂಜೆ ಮಂಗಳಾರತಿ ನಡೆಯಿತು. ನಂತರ ಕಲಶೇಶ್ವರ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಶೃಂಗಾರಗೊಳಿಸಿದ ಅಡ್ಡ ಪಲ್ಲಕಿಯಲ್ಲಿ ಕೂರಿಸಿ ಕಳಸ ದೇವಸ್ಥಾನದಿಂದ ಕಳಸದ ರಥ ಬೀದಿಯ ಮುಖಾಂತರ ಗಿರಿಜಾಂಬ ದೇವಸ್ಥಾನದ ವರೆಗೆ ಉತ್ಸವವನ್ನು ಮಾಡಲಾಯಿತು.
ಗಿರಿಜಾಂಬ ದೇವಸ್ಥಾನದ ಮುಂಬಾಗದಲ್ಲಿ ಮಂಗಳಾರತಿ ನಡೆದು ನಂತರ ಅದೇ ಮಾರ್ಗವಾಗಿ ಕಲಶೇಶ್ವರ ದೇವಸ್ಥಾನ ತಲುಪಲಾಯಿತು.
ಕಲಶೇಶ್ವರ ದೇವಸ್ಥಾನದಿಂದ ಗಿರಿಜಾಂಬ ದೇವಸ್ಥಾನದ ವರೆಗೆ ಕಳಸ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಲಕ್ಷ ದೀಪಗಳನ್ನು ಹಚ್ಚಲಾಗಿತ್ತು.ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿ ಮನೆ ಮಾಲಿಕರು ದೇವರಿಗೆ ಹಣ್ಣು ಕಾಯಿ ಸಮರ್ಪಿಸಿ ಕೃತಾರ್ಥರಾದರು.
ದೀಪೋತ್ಸವ ಕಾರ್ಯಕ್ರಮದಲ್ಲಿ ಕಳಸ ಸೇರಿದಂತೆ,ಮರಸಣಿಗೆ,ಹಿರೇಬೈಲು,ಸಂಸೆ,ಹೊರನಾಡು,ಬಾಳೆಹೊಳೆ ಬಾಗದ ನೂರಾರು ಭಕ್ತರು ಆಗಮಿಸಿ ದೇವರ ದೀಪೋತ್ಸವದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.