ಕಳಸ ಲೈವ್ ವರದಿ
ಕಳಸ ಪಟ್ಟಣದ ರಸ್ತೆ ಬದಿಯಲ್ಲಿ ರಾತ್ರಿ ಹೊತ್ತು ನಿಮ್ಮ ಬೈಕ್ ನಿಲ್ಲಿಸುತ್ತಿದ್ದೀರಾ? ಹಾಗಾದರೆ ಇನ್ನು ಎಚ್ಚೆತ್ತುಕೊಳ್ಳಿ. ಯಾಕೆ ಅಂತೀರಾ ಈ ವರದಿ ಓದಿ.
ಕಳಸ ಪಟ್ಟಣದ ರಸ್ತೆ ಬದಿಯಲ್ಲಿ ಮನೆ ಅಂಗಡಿ ಮಾಲಿಕರು ತಮ್ಮಲ್ಲಿರುವ ಬೈಕ್ ಗಳನ್ನು ನಿಲ್ಲಿಸಲು ಸ್ಥಳವಕಾಶ ಇಲ್ಲದೆ ರಸ್ತೆ ಬದಿಯಲ್ಲಿ ನಿಲ್ಲಿಸುತ್ತಿರುವುದು ಮಾಮೂಲಿಯಾಗಿದೆ. ಆದರೆ ರಾತ್ರಿ ನಿಲ್ಲಿಸಿದ ಬೈಕ್ ನಲ್ಲಿದ್ದ ಪೆಟ್ರೋಲ್ ಬೆಳಿಗ್ಗೆ ನೋಡುವಾಗ ಖಾಲಿಯಾಗುತ್ತಿದೆ.
ಪಟ್ಟಣದ ಮಂಜಿನಕಟ್ಟೆ ಸಮೀಪ ನಿಲ್ಲಿಸುತ್ತಿದ್ದ ಬೈಕ್ ಗಳಲ್ಲಿ ಪ್ರತಿ ನಿತ್ಯ ಪೆಟ್ರೋಲ್ ಖಾಲಿ ಆಗುತ್ತಿರುವ ಬಗ್ಗೆ ಅನುಮಾನಗೊಂಡು, ಅಲ್ಲಿಯ ಅಂಗಡಿಯೊಂದರಲ್ಲಿ ಅಳವಡಿಸಿರುವ ಸಿಸಿ ಕ್ಯಾಮರದಲ್ಲಿ ಚೆಕ್ ಮಾಡಿದಾಗ ಬೆಳಗ್ಗಿನ ಜಾವ ಪೆಟ್ರೋಲ್ ಕಳ್ಳತನ ಮಾಡುತ್ತಿರುವುದು ಗಮನಕ್ಕೆ ಬಂದಿದೆ.
ಸಿಸಿ ಕ್ಯಾಮರ ದಲ್ಲಿ ಕಳ್ಳರು ಅಡ್ಡಾಡುವ ದೃಶ್ಯ ಕಂಡು ಬರುತ್ತಿದೆ. ಆದರೆ ಚಾಲಕಿ ಕಳ್ಳರು ಸಿಸಿ ಕ್ಯಾಮರ ಇರುವುದನ್ನು ಗಮನಿಸಿ ಕ್ಯಾಮರಕ್ಕೆ ಪ್ಲಾಸ್ಟಿಕ್ ಕವರನ್ನು ಅಡ್ಡಲಾಗಿ ಇಟ್ಟು ನಂತರ ಬೈಕನ್ನು ದೂರ ತಳ್ಳಿಕೊಂಡು ಹೋಗಿ ಅಲ್ಲಿ ಅದರಲ್ಲಿದ್ದ ಪೆಟ್ರೋಲ್ ತೆಗೆದು ನಂತರ ಬೈಕನ್ನು ಅದೇ ಜಾಗದಲ್ಲಿ ತಂದು ನಿಲ್ಲಿಸುತ್ತಿದ್ದಾರೆ.
ಆದ್ದರಿಂದ ಇನ್ನು ಮುಂದೆ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವವರು ಎಚ್ಚರ ವಹಿಸುವುದು ಅಗತ್ಯವಾಗಿದೆ.