ಕಳಸ ಲೈವ್ ವರದಿ
ಕಳಸ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡಾ ಕೂಟ ಗುರುವಾರ ಕಳಸ ಕೆಪಿಎಸ್ ಶಾಲಾ ಮೈದಾನದಲ್ಲಿ ನಡೆಯಿತು.
ಬುಧವಾರ ಕಳಸ ತಾಲ್ಲೂಕಿನ ಕಳಸ, ಸಂಸೆ, ಇಡಕಣಿ, ಹೊರನಾಡು ಪಂಚಾಯಿತಿ ವ್ಯಾಪ್ತಿ ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಖೋಖೋ, ವಾಲಿಬಾಲ್ ಕ್ರೀಡೆಗಳನ್ನು ನಡೆಸಲಾಗಿತ್ತು.
ಇಲ್ಲಿ ಆಯ್ಕೆಯಾದ ತಂಡವನ್ನು ಗುರುವಾರ ಹೋಬಳಿ ಮಟ್ಟದಲ್ಲಿ ಕ್ರೀಡಾ ಕೂಟವನ್ನು ನಡೆಸಲಾಯಿತು.
ಅಂತಿಮವಾಗಿ ಮಹಿಳೆಯರ ವಿಭಾಗದಲ್ಲಿ ಕಬಡ್ಡಿ ಹೊರನಾಡು ಪ್ರಥಮ, ಇಡಕಣಿ ದ್ವಿತೀಯ, ವಾಲಿಬಾಲ್ ಹೊರನಾಡು ಪ್ರಥಮ, ಇಡಕಣಿ ದ್ವಿತೀಯ, ಖೋ ಖೋ ಕಳಸ ಪ್ರಥಮ, ಹೊರನಾಡು ದ್ವಿತೀಯ, ಯೋಗ ಇಡಕಣಿ,
ಪುರುಷರ ವಿಭಾಗದಲ್ಲಿ ಖೋ ಖೋ ಮರಸಣಿಗೆ ಪ್ರಥಮ, ಕಳಸ ದ್ವಿತೀಯ, ಕಬಡ್ಡಿ ಕಳಸ ಪ್ರಥಮ, ಮರಸಣಿಗೆ ದ್ವಿತೀಯ, ವಾಲಿಬಾಲ್ ಇಡಕಣಿ ಪ್ರಥಮ, ಕಳಸ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.