ಕಳಸ ಲೈವ್ ವರದಿ
ಮೂಡಿಗೆರೆ ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಅಥ್ಲೆಟಿಕ್ ಕ್ರೀಡಾಕೂಟವು ದಿನಾಂಕ 15/11/2022 ರಂದು ಮೂಡಿಗೆರೆ ಹೊಯ್ಸಳ ಕ್ರೀಡಾಂಗಣದಲ್ಲಿ ನಡೆಯಿತು.
ಪ್ರಾಥಮಿಕ ವಿಭಾಗದಲ್ಲಿ ಕಳಸ ಜೆ.ಇ.ಎಮ್. ಶಾಲೆಯ ಸನಾ 400ಮೀ ಓಟದಲ್ಲಿ ಪ್ರಥಮ ಸ್ಥಾನ, 600ಮೀ ಓಟದಲ್ಲಿ ಮಲ್ಲಮ್ಮ ತೃತೀಯ ಸ್ಥಾನ, ಹುಡುಗಿಯರ ರಿಲೆಯಲ್ಲಿ ಕ್ಯಾರಲ್ ,ಸೃಷ್ಟಿ ಎಂ ಜೈನ್ ,ಪ್ರೀಷಲ್ ಹಾಗೂ ಸನಾ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಪ್ರೌಢಶಾಲಾ ವಿಭಾಗದಲ್ಲಿ ಮಹಿತ್. ಆರ್. ಹೆಬ್ಬಾರ್ 100ಮೀ, 200ಮೀ ಮತ್ತು ಉದ್ದಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟದ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಯನ್ನು ಪಡೆದಿರುತ್ತಾರೆ.
ಸುಧೀಶ್ ಜಿ ಎಸ್ ಇವರು 100ಮೀ ಹಾಗೂ ತ್ರಿವಿಧ ಜಿಗಿತದಲ್ಲಿ ದ್ವಿತಿಯ ಸ್ಥಾನ, 5000ಮೀ ನಡಿಗೆಯಲ್ಲಿ ಆಕಾಶ್ ಎಸ್ ಪ್ರಥಮ ಸ್ಥಾನ ಹಾಗೂ ಸಮೃದ್ಧ್ ಹೆಚ್ ಎನ್ ದ್ವಿತೀಯ ಸ್ಥಾನ , ಮೊಹಮ್ಮದ್ ಫಾಯಿಜ್ ಕೆ ಎ 1500ಮೀ ಓಟದಲ್ಲಿ ದ್ವಿತೀಯ ಸ್ಥಾನ, ಗುಂಡು ಎಸೆತದಲ್ಲಿ ದೃತಿಕ ಪ್ರಥಮ ಸ್ಥಾನ , ಮಾನ್ವಿ 400ಮೀ ಓಟದಲ್ಲಿ ತೃತೀಯ ಸ್ಥಾನ, ಚಕ್ರ ಎಸೆತದಲ್ಲಿ ನಿಹಾರಿಕಾ ತೃತೀಯ ಸ್ಥಾನ ಹಾಗೂ ಗಂಡು ಮಕ್ಕಳ 4*100ಮೀ ರಿಲೇಯಲ್ಲಿ ಸುದೇಶ್ ಜಿ ಎಸ್, ಗೌತಮ್ ಎನ್ ಜಿ ,ಸೃಜನ್ ಎಸ್ ಎಸ್ ಹಾಗೂ ಮಹಿತ್ ಆರ್ ಹೆಬ್ಬಾರ್ ಪ್ರಥಮ ಸ್ಥಾನ ಪಡೆದಿರುತ್ತಾರೆ.