ಕಳಸ ಲೈವ್ ವರದಿ
ಬಾಳೆಹೊಳೆಯಲ್ಲಿ ಬೈಕೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಸ್ಸಾಂ ಮೂಲದ ವ್ಯಕ್ತಿಯೋರ್ವ ಮೃತ ಪಟ್ಟಿದ್ದು ಇನ್ನೋರ್ವನಿಗೆ ಗಂಭೀರ ಗಾಯವಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಮೃತನಾದ ವ್ಯಕ್ತಿ ಅಸ್ಸಾಂ ಮೂಲದ ಸಾಧಿಕ್ ಆಲಿ, ಗಾಯವಾದವನು ಬಹು ಆಲಿ ಎಂದು ಗುರುತಿಸಲಾಗಿದೆ.
ಸ್ಥಳಿಯ ತೋಟವೊಂದರಲ್ಲಿ ಕೆಲಸಕ್ಕಾಗಿ ಬಂದ ಇವರು ಸೋಮವಾರ ಮಧ್ಯಾಹ್ನ ಬೈಕ್ ನಲ್ಲಿ ಬಾಳೆಹೊಳೆ ಪೇಟೆಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನಲ್ಲಿದ್ದ ಇಬ್ಬರಿಗೂ ಗಂಭೀರ ಗಾಯಗಳಾಗಿತ್ತು. ಕೂಡಲೇ ಸ್ಥಳಿಯ ಆಟೋ ಚಾಲಕರು ಬಾಳೆಹೊಳೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡ ಹೋದ ಸಂದರ್ಭದಲ್ಲಿ ಓರ್ವ ಮೃತನಾಗಿದ್ದಾನೆ. ಇನ್ನೋರ್ವನನ್ನು ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.